ADVERTISEMENT

ಇಂದಿನಿಂದ ವಚನ ವಿಜಯೋತ್ಸವ: ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 9:24 IST
Last Updated 29 ಜನವರಿ 2018, 9:24 IST
ಬೀದರ್‌ನ ಬಸವಗಿರಿಯಲ್ಲಿ ವಚನ ವಿಜಯೋತ್ಸವಕ್ಕಾಗಿ ಸಿದ್ಧಗೊಂಡಿರುವ ಸರ್ವಜ್ಞ ಮಹಾ ಮಂಟಪ
ಬೀದರ್‌ನ ಬಸವಗಿರಿಯಲ್ಲಿ ವಚನ ವಿಜಯೋತ್ಸವಕ್ಕಾಗಿ ಸಿದ್ಧಗೊಂಡಿರುವ ಸರ್ವಜ್ಞ ಮಹಾ ಮಂಟಪ   

ಬೀದರ್: ಜ. 29ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಚನ ವಿಜಯೋತ್ಸವಕ್ಕೆ ನಗರದ ಪಾಪನಾಶ ದೇಗುಲದ ಹಿಂದುಗಡೆ ಇರುವ ಬಸವಗಿರಿ ಅಣಿಯಾಗಿದೆ. ಬಸವಗಿರಿಯಲ್ಲಿ ಏಕಕಾಲಕ್ಕೆ ಹತ್ತು ಸಾವಿರ ಜನ ಕುಳಿತುಕೊಳ್ಳಬಹುದಾದ ಕವಿ ಸರ್ವಜ್ಞ ಹೆಸರಿನಲ್ಲಿ ಮಹಾ ಮಂಟಪ ನಿರ್ಮಿಸಲಾಗಿದೆ. ವೇದಿಕೆಗೆ ಖ್ಯಾತ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹೆಸರಿಡಲಾಗಿದೆ.

ಸ್ಥಳೀಯರು, ಹೊರ ಜಿಲ್ಲೆಗಳಿಂದ ಬರುವ ಭಕ್ತರು ಹಾಗೂ ಅತಿಥಿಗಳ ಹಸಿವು ತಣಿಸಲು ನೀಲಾಂಬಿಕಾ ಪ್ರಸಾದ ಮಂಟಪವನ್ನು ನಿರ್ಮಿಸಲಾಗಿದೆ. ಮೂರೂ ದಿನ ಬಗೆ ಬಗೆಯ ಪ್ರಸಾದ ಇರಲಿದೆ. ಭಜ್ಜಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಧಪಾಟಿ, ಗೋಧಿ ಹುಗ್ಗಿ, ಅನ್ನ, ಸಾಂಬಾರು ಪ್ರಸಾದದ ವಿಶೇಷ ಆಗಿರಲಿವೆ. ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ವಿವಿಧೆಡೆಯಿಂದ ಬರುವ ಅತಿಥಿಗಳಿಗೆ ನೀಲಮ್ಮನ ದಾಸೋಹ ಮಂಟಪದಲ್ಲಿ ಹೊಸದಾಗಿ ಕಟ್ಟಲಾದ 16 ಕೋಣೆಗಳು, ಗುರುದ್ವಾರ, ನಗರದ ವಿವಿಧ ವಸತಿಗೃಹಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ADVERTISEMENT

ಸ್ವಾಗತ, ಹಣಕಾಸು, ಆಹಾರ, ಪ್ರಸಾದ ವಿತರಣೆ, ಕುಡಿಯುವ ನೀರು, ಸಾರಿಗೆ, ಮಂಟಪ ಸೇರಿದಂತೆ 25 ಸಮಿತಿಗಳ ಪದಾಧಿಕಾರಿಗಳು ಉತ್ಸವವನ್ನು ಸರ್ವ ರೀತಿಯಿಂದಲೂ ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.

40 ಕಮಾನುಗಳು: ನಗರ ಅಲಂಕಾರ ಭಾಗವಾಗಿ ನಗರದ ವಿವಿಧೆಡೆ ವಚನ ವಿಜಯೋತ್ಸವಕ್ಕೆ ಸ್ವಾಗತ ಕೋರುವ 40 ಕಮಾನುಗಳನ್ನು ಹಾಕಲಾಗಿದೆ. ಕಂಬಗಳಿಗೆ ಶರಣರ ವಚನಗಳ 240 ಪಟಗಳನ್ನು ಕಟ್ಟಲಾಗಿದೆ.

ಇನ್ನು ಬಸವೇಶ್ವರ ವೃತ್ತದಿಂದ ಬಸವಗಿರಿ ವರೆಗಿನ ಮಾರ್ಗದಲ್ಲಿ ಇರುವ ಎಲ್ಲ ಮಹಾಪುರುಷರ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಷಟ್‌ಸ್ಥಲ ಧ್ವಜ ಹಾಗೂ ವಚನ ವಿಜಯೋತ್ಸವದ ಫರಾರಿಗಳನ್ನು ಕಟ್ಟಿ ವೃತ್ತಗಳನ್ನು ಆಕರ್ಷಕಗೊಳಿಸಲಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ರಮೇಶ ಮಠಪತಿ ತಿಳಿಸುತ್ತಾರೆ.

ವಚನ ವಿಜಯೋತ್ಸವ ಅಂಗವಾಗಿ ನಗರದಲ್ಲಿ ಜನವರಿ 31 ರಂದು ನಡೆಯಲಿರುವ ಲಿಂಗಾಯತ ಧರ್ಮ ಗ್ರಂಥ ಗುರುವಚನ ಮತ್ತು ವಚನ ಸಾಹಿತ್ಯದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರಿಗಾಗಿ ‘ವಚನ ವಿಜಯೋತ್ಸವ’ ಬರಹ ಹೊಂದಿರುವ 30 ಸಾವಿರ ಟೊಪ್ಪಿಗೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೇಳುತ್ತಾರೆ.

ಬಸವಗಿರಿಗೆ ಬರುವ ಜನರ ಅನುಕೂಲಕ್ಕಾಗಿ ನಗರದ ವಿವಿಧೆಡೆಯಿಂದ ಬಸವಗಿರಿವರೆಗೆ ನಗರ ಸಾರಿಗೆ ಬಸ್‌ ಓಡಿಸಲು ಈಗಾಗಲೇ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಪಾಪನಾಶ ಗೇಟ್ ಬಳಿ ಆರಂಭಿಸಲಾದ ಸ್ವಾಗತ ಕಾರ್ಯಾಲಯದ ಬಳಿ ನಾಲ್ಕು ವಾಹನಗಳು ಇರಲಿದ್ದು, ಬಸ್‌ನಲ್ಲಿ ಬಂದು ಪಾಪನಾಶ ಗೇಟ್ ಬಳಿ ಇಳಿದುಕೊಂಡ ಭಕ್ತರನ್ನು ಬಸವಗಿರಿಗೆ ತಲುಪಿಸಲಿವೆ ಎಂದು ತಿಳಿಸುತ್ತಾರೆ.

ವಚನ ವಿಜಯೋತ್ಸವದಲ್ಲಿ ಇಂದು
ಸಾಮೂಹಿಕ ಇಷ್ಟಲಿಂಗ ಯೋಗ: ಸಾನ್ನಿಧ್ಯ- ಅಕ್ಕ ಅನ್ನಪೂರ್ಣ. ನೇತೃತ್ವ- ಪ್ರಭುದೇವರು. ಷಟ್‌ಸ್ಥಲ ಧ್ವಜಾರೋಹಣ– ನಿವೃತ್ತ ಎಂಜಿನಿಯರ್ ಪಿ. ಸಂಗಪ್ಪ. ಮುಖ್ಯ ಅತಿಥಿಗಳು- ಪ್ರೊ. ಲತಾ ಚಂದ್ರಶೇಖರ ತಾಂಡೂರೆ, ವಿಜಯಕುಮಾರ ಆನಂದೆ, ಧೂಳಪ್ಪ ಹೊಸಾಳೆ, ಬಸವರಾಜ ಬಲ್ಲೂರು, ಗುರುಶಾಂತಪ್ಪ ನಿಂಗದಳ್ಳಿ, ರಮೇಶ ಪಸ್ತಾಪುರ, ಯು. ಸಂಗಪ್ಪ, ವೀರಭದ್ರಪ್ಪ ನಂದ್ಯಾಳ, ಶಿವಕುಮಾರ ಬಿರಾದಾರ, ಮಲ್ಲಿಕಾರ್ಜುನ ಶೆಟಕಾರ, ಪರಮೇಶ್ವರ ಕೋರಿ, ನಾಗಶೆಟ್ಟಿ ಲಂಜವಾಡೆ, ಅನಿಲಕುಮಾರ ಗಂದಗೆ, ರಾಜಕುಮಾರ ಮಂಗಲಗಿ, ಸಹಜಾನಂದ ಕಂದಗೂಳೆ, ಮಲ್ಲಿಕಾರ್ಜುನ ಸಂಗಮಕರ್, ಸುರೇಶ ಜಾಪುರೆ, ಶಂಕರ ಬಿರಾದಾರ, ಗುರುರಾಜ ಮೋಳಕೇರಿ, ಅಶೋಕ ಗಂಧಿಗುಡೆ, ರಾಜಶೇಖರ ಮಠ, ಶಿವಪುತ್ರ ಪಾಟೀಲ, ಭಕ್ತರಾಜ ಪಾಟೀಲ, ಹಣಮಂತಪ್ಪ ಸೋರಳ್ಳಿ. ಸ್ಥಳ- ಬಸವಗಿರಿ. ಬೆಳಿಗ್ಗೆ 8

ಉದ್ಘಾಟನಾ ಸಮಾರಂಭ ಮತ್ತು ಯುವ ಪ್ರೇರಣಾ ಸಮಾವೇಶ: ಉದ್ಘಾಟನೆ- ವಿಜಯಪುರ ಜ್ಞಾನ ಶಿವಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ. ನೇತೃತ್ವ- ಅಕ್ಕ ಅನ್ನಪೂರ್ಣ. ಮುಖ್ಯ ಅತಿಥಿಗಳು- ಬೆಂಗಳೂರಿನ ಲೇಖಕ ಕೆ.ಇ. ರಾಧಾಕೃಷ್ಣ, ವ್ಯಕ್ತಿತ್ವ ವಿಕಸನ ತರಬೇತುದಾರ ಎಸ್.ಜಿ. ಪಾಟೀಲ, ನೇತ್ರ ತಜ್ಞ ಡಾ. ಚಂದ್ರಪ್ಪ ಎಸ್. ರೇಷ್ಮೆ. ಅಕ್ಕನಾಗಲಾಂಬಿಕಾ ಪುರಸ್ಕಾರ- ಇಂಡಿಯನ್ ಆರ್ಮಿಯ ಕ್ಯಾಪ್ಟನ್ ನವೀನ್ ನಾಗಪ್ಪ. ವಿಶೇಷ ಪುರಸ್ಕಾರ- ಉತ್ತರ ಕರ್ನಾಟಕದ ಮೊದಲ ಮಹಿಳಾ ಪೈಲಟ್ ಪ್ರೀತಿ ಸುಧೀರ ಬಿರಾದಾರ. ಅಧ್ಯಕ್ಷತೆ- ಸ್ವಾಗತ ಸಮಿತಿಯ ಅಧ್ಯಕ್ಷೆ ನೀಲಮ್ಮ ರೂಗನ್. ಅತಿಥಿಗಳು- ಡಾ. ಬಸವರಾಜ ಪಾಟೀಲ ಅಷ್ಟೂರು, ಬಿ.ಎಸ್. ದೇಸಾಯಿ, ಎಲ್. ಮಲ್ಲಿಕಾರ್ಜುನ ಬಾಳೆಕಾಯಿ, ವೀರಣ್ಣ ಹಲಶೆಟ್ಟಿ, ಸಿ.ಎಸ್. ಪಾಟೀಲ. ದಾಸ್ ಸೂರ್ಯವಂಶಿ, ಪ್ರೊ. ಶಿವನಾಥ ಪಾಟೀಲ, ಡಾ. ಜಗನ್ನಾಥ ಹೆಬ್ಬಾಳೆ, ಪ್ರೊ. ಶಿವಶಂಕರ ರಾಂಪುರೆ, ಗುಂಡಯ್ಯ ತೀರ್ಥ, ಸೋಮನಾಥ ರಾಜೇಶ್ವರೆ, ಬಸವರಾಜ ಲಿಂಗಶೆಟ್ಟರ್, ಶಿವಪ್ಪ ಜೂಜಾ. ಬೆಳಿಗ್ಗೆ 11

ಲಿಂಗಾಯತ ಸ್ವತಂತ್ರ ಧರ್ಮ ಸಮಾವೇಶ: ಸಾನ್ನಿಧ್ಯ– ಬೆಲ್ದಾಳ ಸಿದ್ಧರಾಮ ಶರಣರು. ನೇತೃತ್ವ– ಡಾ. ಗಂಗಾಂಬಿಕೆ ಅಕ್ಕ, ಗುರುಬಸವ ಪಟ್ಟದ್ದೇವರು. ಜ್ಯೋತಿ ಪ್ರಜ್ವಲನೆ– ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ದಯಾನಂದ ಅಗಸರ್‌. ಅಧ್ಯಕ್ಷತೆ– ಪ್ರೊ. ಸಿದ್ದಣ್ಣ ಲಂಗೋಟಿ. ಉಪನ್ಯಾಸ– ಬೆಂಗಳೂರಿನ ಸಾಹಿತಿ ಜೆ.ಎಸ್‌. ಪಾಟೀಲ, ಶಹಾಪುರದ ವಿಶ್ವರಾಧ್ಯ ಸತ್ಯಂಪೇಟ. ಮುಖ್ಯ ಅತಿಥಿಗಳು– ಕಲಘಟಗಿಯ ಡಾ. ಸಂಗಮೇಶ ಕಲ್ಹಾಳ, ಬಸವರಾಜ ಧನ್ನೂರು, ರಾಮಲಿಂಗಾರೆಡ್ಡಿ ದೇಶಮುಖ, ಆನಂದ ದೇವಪ್ಪ, ಬಸವರಾಜ ಪಾಟೀಲ, ಪ್ರಕಾಶ ಅಸುಂಡೆ, ಶ್ರೀಕಾಂತ ಸ್ವಾಮಿ, ಬಸವರಾಜ ರುದ್ರವಾಡಿ, ಶಾಮರಾವ್ ಸುಲಗುಂಟೆ, ಧನರಾಜ ಕರಂಜೆ. ಮಧ್ಯಾಹ್ನ 3

* * 

ಈ ಬಾರಿಯ ವಚನ ವಿಜಯೋತ್ಸವ ಐತಿಹಾಸಿಕ ಆಗಲಿದೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಆಯಾ ಸಮಿತಿಗಳು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿವೆ. ಅಕ್ಕ ಅನ್ನಪೂರ್ಣ
ಬಸವ ಸೇವಾ ಪ್ರತಿಷ್ಠಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.