ADVERTISEMENT

ಉದ್ಯಮಿಗಳಿಗೆ ರಫ್ತು ಮಾಹಿತಿ ಒದಗಿಸಿದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 15:09 IST
Last Updated 24 ಸೆಪ್ಟೆಂಬರ್ 2021, 15:09 IST
ಬೀದರ್‍ನಲ್ಲಿ ನಡೆದ ರಫ್ತುದಾರರ ಸಮಾವೇಶವನ್ನು ಬೆಂಗಳೂರಿನ ವಿದೇಶ ವ್ಯಾಪಾರ ನಿರ್ದೇಶನಾಲಯದ ಉಪ ಮಹಾ ನಿರ್ದೇಶಕ ಡಾ. ಬಿ. ಪುನ್ನಂಕುಮಾರ ಉದ್ಘಾಟಿಸಿದರು. ರಮೇಶ ಮಠಪತಿ, ನಾಗಪ್ಪ ರೆಡ್ಡಿ, ಸತೀಶ್, ಸುರೇಖಾ ಮುನೋಳಿ, ಜೆ.ಕೆ. ದೇವೇಂದ್ರಪ್ಪ, ಭೋಲಾಜಿ ಪಾಟೀಲ, ವಿಜಯಕುಮಾರ, ಸುಬ್ರಹ್ಮಣ್ಯ ಪ್ರಭು ಇದ್ದರು
ಬೀದರ್‍ನಲ್ಲಿ ನಡೆದ ರಫ್ತುದಾರರ ಸಮಾವೇಶವನ್ನು ಬೆಂಗಳೂರಿನ ವಿದೇಶ ವ್ಯಾಪಾರ ನಿರ್ದೇಶನಾಲಯದ ಉಪ ಮಹಾ ನಿರ್ದೇಶಕ ಡಾ. ಬಿ. ಪುನ್ನಂಕುಮಾರ ಉದ್ಘಾಟಿಸಿದರು. ರಮೇಶ ಮಠಪತಿ, ನಾಗಪ್ಪ ರೆಡ್ಡಿ, ಸತೀಶ್, ಸುರೇಖಾ ಮುನೋಳಿ, ಜೆ.ಕೆ. ದೇವೇಂದ್ರಪ್ಪ, ಭೋಲಾಜಿ ಪಾಟೀಲ, ವಿಜಯಕುಮಾರ, ಸುಬ್ರಹ್ಮಣ್ಯ ಪ್ರಭು ಇದ್ದರು   

ಬೀದರ್: ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ವಾಣಿಜ್ಯ ಉತ್ಸವ ಅಂಗವಾಗಿ ಇಲ್ಲಿಯ ನೌಬಾದ್‍ನ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ನಡೆದ ರಫ್ತುದಾರರ ಸಮಾವೇಶವು ಜಿಲ್ಲೆಯ ಉದ್ಯಮಿಗಳಿಗೆ ವಿವಿಧ ಉತ್ಪನ್ನಗಳ ರಫ್ತಿನ ಬಗೆಗೆ ಮಾಹಿತಿ ಒದಗಿಸಿತು.

ಜಿಲ್ಲೆಯಲ್ಲಿ ವಿವಿಧ ಉತ್ಪನ್ನಗಳ ರಫ್ತಿಗೆ ಇರುವ ವಿಪುಲ ಅವಕಾಶಗಳನ್ನು ಮನವರಿಕೆ ಮಾಡಿತು.

ಬೆಂಗಳೂರಿನ ವಿದೇಶ ವ್ಯಾಪಾರ ನಿರ್ದೇಶನಾಲಯದ ಉಪ ಮಹಾ ನಿರ್ದೇಶಕ ಡಾ. ಬಿ. ಪುನ್ನಂಕುಮಾರ ಅವರು, ರಫ್ತು, ಆಮದು ವಿಧಾನ, ರಫ್ತು ವಸ್ತುಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯಿಂದ ಈಗಾಗಲೇ ವಿವಿಧ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವ ಉದ್ಯಮಿಗಳು ತಮ್ಮ ಅನುಭವ ಹಂಚಿಕೊಂಡರು.

ADVERTISEMENT

ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ ಸಮಾವೇಶವನ್ನು ಉದ್ಘಾಟಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ ಅಧ್ಯಕ್ಷತೆ ವಹಿಸಿದ್ದರು. ಉಪ ನಿರ್ದೇಶಕ ನಾಗಪ್ಪ ರೆಡ್ಡಿ, ಸಿ. ರಂಗಪಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಭೋಲಾಜಿ ಪಾಟೀಲ, ಜಿಲ್ಲಾ ಅಗ್ರ ಬ್ಯಾಂಕ್ ವ್ಯವಸ್ಥಾಪಕ ಸತೀಶ್ ಎಂ., ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವರಾಜ ಹಲಶೆಟ್ಟಿ, ಫಾರ್ಮಾ ಮತ್ತು ಕೆಮಿಕಲ್ ಅಸೋಸಿಯೇಷನ್ ಅಧ್ಯಕ್ಷ ಜೆ.ಕೆ. ದೇವೇಂದ್ರಪ್ಪ, ಎಸ್.ಸಿ, ಎಸ್.ಟಿ. ಕೈಗಾರಿಕೆಗಳ ಸಂಘದ ಅಧ್ಯಕ್ಷ ವಿಜಯಕುಮಾರ, ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಉಪಸ್ಥಿತರಿದ್ದರು.

ಖಾದಿ, ಗ್ರಾಮೀಣ ಕೈಗಾರಿಕೆ ಉಪ ನಿರ್ದೇಶಕ ರಮೇಶ ಮಠಪತಿ ನಿರೂಪಿಸಿದರು. ರಾಜಕುಮಾರ ಪಾಟೀಲ ವಂದಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ, ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಹಾಗೂ ರಾಜ್ಯ ವಾಣಿಜ್ಯ ಇಲಾಖೆ ವತಿಯಿಂದ ಸಮಾವೇಶ ಸಂಘಟಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.