ADVERTISEMENT

ಕಾಯಕ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 25 ಮೇ 2022, 14:34 IST
Last Updated 25 ಮೇ 2022, 14:34 IST
ಸುಬ್ಬಣ್ಣ ಕರಕನಳ್ಳಿ
ಸುಬ್ಬಣ್ಣ ಕರಕನಳ್ಳಿ   


ಕಾಯಕ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೀದರ್: ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕವು ತನ್ನ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ನೀಡಲಿರುವ ಕಲ್ಯಾಣ ಕರ್ನಾಟಕ ಕಾಯಕ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ಸಾಹಿತ್ಯ, ಸಂಸ್ಕøತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಹಾಗೂ ಸಾಧನೆಗೈದವರು ಜೂನ್ 5 ರ ಒಳಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9901612139ಗೆ ಸಂಪರ್ಕಿಸಬಹುದು ಎಂದು ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕದ ರಾಜ್ಯ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ತಿಳಿಸಿದ್ದಾರೆ.

* * *

ನಗರ ಘಟಕದ ಪದಾಧಿಕಾರಿಗಳ ಆಯ್ಕೆ
ಬೀದರ್: ಆಮ್ ಆದ್ಮಿ ಪಕ್ಷದ ಬೀದರ್ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ನಗರ ಘಟಕದ ಅಧ್ಯಕ್ಷ ಸಿದ್ದಪ್ಪ ಫುಲಾರಿ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವಿವರ ಹೀಗಿದೆ. ವಿದ್ಯಾಸಾಗರ ಗಾದಗಿ, ಸುವರ್ಣಾ ಹೆಗ್ಗೆ, ಎಂ.ಡಿ. ನಯುಮುದ್ದಿನ್ (ಉಪಾಧ್ಯಕ್ಷರು), ಎಂ.ಡಿ. ಮುಸ್ತಫಾ (ಪ್ರಧಾನ ಕಾರ್ಯದರ್ಶಿ), ರೇವಣಸಿದ್ದಪ್ಪ, ಜಗದೀಶ, ಜಿಮ್ಮಿ ಮೈಲೂರ, ಗಣೇಶ, ನವೀದ್‍ಖಾನ್ (ಕಾರ್ಯದರ್ಶಿಗಳು), ರಾಮ್ಲು ಡಿ (ಖಜಾಂಚಿ) ಮತ್ತು ಅರವಿಂದ (ಮಾಧ್ಯಮ ಸಲಹೆಗಾರ).
ಪಕ್ಷದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕೈಲಾಸ ದುಬೆ, ಜಿಲ್ಲಾ ಉಪಾಧ್ಯಕ್ಷ ಸೈಯದ್ ಜಮೀಲ್ ಖಾದ್ರಿ, ಪ್ರಧಾನ ಕಾರ್ಯದರ್ಶಿ ಅವಿನಾಶ ಪಿ.ಕೆ, ಪ್ರಮುಖರಾದ ರಮೇಶ ಪಾಸ್ವಾನ್, ಗುಲಾಂ ಅಲಿ, ಶಿವರಾಜ ಕೋರೆ, ಕುಮಾರ ಕಾಂತೆ, ದಿನೇಶ ಗುಪ್ತಾ ಇದ್ದರು.

* * *

ಜನವಾಡ ಜಿ.ಪಂ ವ್ಯಾಪ್ತಿಯಲ್ಲೇ ಮುಂದುವರಿಸಿ
ಜನವಾಡ: ಬೀದರ್ ತಾಲ್ಲೂಕಿನ ಕಪಲಾಪುರ(ಎ) ಗ್ರಾಮ ಪಂಚಾಯಿತಿಯನ್ನು ಜನವಾಡ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲೇ ಮುಂದುವರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೀದರ್‌ನಲ್ಲಿ ನಿಯೋಗದಲ್ಲಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ.
ಮುಖಂಡರಾದ ಅಶೋಕ ಕೋರವಾ, ಅಮರ ಚಾಂಬಳೆ, ಇಮ್ರಾನ್‍ಖಾನ್, ವೀರೇಶ ತಳಘಟೆ, ಸಂತೋಷ್ ನಿಟ್ಟೂರೆ, ಆನಂದ ಧನ್ನೂರೆ ನಿಯೋಗದಲ್ಲಿ ಇದ್ದರು.

* * *

ಕೃತಿ ಬಿಡುಗಡೆ, ಅಭಿನಂದನಾ ಸಮಾರಂಭ ನಾಳೆ
ಬೀದರ್: ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಮೇ 27 ರಂದು ಮಧ್ಯಾಹ್ನ 3.30ಕ್ಕೆ ಅಂತರಾಳದ ಭಾವಗಳು ಪುಸ್ತಕ ಬಿಡುಗಡೆ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ ಅಧ್ಯಕ್ಷತೆ ವಹಿಸುವರು. ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್, ನಿವೃತ್ತ ಪ್ರಾಚಾರ್ಯ ವಿಠ್ಠಲದಾಸ್ ಪ್ಯಾಗೆ, ಬಿ. ನಾಗಪ್ಪ, ಅಖಿಲ್ ಖುರೇಶಿ, ಕೆ.ಟಿ. ವಿಶ್ವನಾಥ, ಮಹಾಂತೇಶ ಕೌಲಗಿ, ಬಾಬುರಾವ್ ಮಲ್ಕಾಪುರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಸಂವಿಧಾನ ಸಂರಕ್ಷಣಾ ಸಮಿತಿಯ ಸಹ ಸಂಚಾಲಕ ಅಶೋಕಕುಮಾರ ಮಾಳಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.