ADVERTISEMENT

‘ಶುಚಿತ್ವಕ್ಕೆ ಮಹತ್ವ ನೀಡಿ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 8:55 IST
Last Updated 4 ಡಿಸೆಂಬರ್ 2019, 8:55 IST
ಕಮಲನಗರ ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ಸ್ವ-ಸಹಾಯ ಸಂಘಗಳ ಮಹಿಳೆಯರು ಜಾಥಾ ನಡೆಸಿದರು
ಕಮಲನಗರ ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ಸ್ವ-ಸಹಾಯ ಸಂಘಗಳ ಮಹಿಳೆಯರು ಜಾಥಾ ನಡೆಸಿದರು   

ಕಮಲನಗರ: ‘ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳಲ್ಲಿಯ ಅಡುಗೆ ಸಿಬ್ಬಂದಿ ಶುಚಿತ್ವಕ್ಕೆ ಮಹತ್ವ ನೀಡಬೇಕು’ ಎಂದು ನೋಡಲ್ ಅಧಿಕಾರಿ ರಾಜಕುಮಾರ ಪಾಟೀಲ ಸೂಚನೆ ನೀಡಿದರು.

ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ಪರಿವರ್ತನ ಮಹಿಳಾ ಮಂಡಳ ಕುಟರನಟ್ಟಿ ಸಹಯೋಗದಲ್ಲಿ ನಡೆದ ಸ್ವ-ಸಹಾಯ ಸಂಘಗಳ ಮಹಿಳೆಯರ ಜಾಥಾ ಕಾರ್ಯಕ್ರಮದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಮನೆಗಿಂತಲೂ ಸಂತೃಪ್ತಿ ಊಟ ಶಾಲೆಯಲ್ಲಿ ದೊರಕುತ್ತಿದ್ದು, ಅಡುಗೆ ಸಿಬ್ಬಂದಿ ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಮುತುವರ್ಜಿ ವಹಿಸಬೇಕು ಎಂದರು.

ADVERTISEMENT

ಅಡುಗೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಸರ್ಕಾರಿ ಶಾಲೆಯಲ್ಲಿ ಬಡ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಿಗೆ ಶುಚಿಯಾದ ಊಟ ನೀಡಬೇಕು ಎಂದರು.

ಶಾಲಾ ಸಮನ್ವಯ ಸಮಿತಿ ಸದಸ್ಯೆ ಶಿಲ್ಪಾ ಸಂತೋಷ ಬನವಾಸೆ ಮಾತನಾಡಿ,‘ಮಹಿಳೆಯರು ತಮ್ಮ ಸ್ವಂತ ಮನೆಯಲ್ಲಿಯೂ ಸಹ ಅಗತ್ಯ ಜಾಗ್ರತಿವಹಿಸಬೇಕು. ಕಲುಷಿತ ಆಹಾರ ಸೇವನೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸರಬರಾಜು ಮಾಡುವ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದವು ಎಂದು ಕಂಡುಬಂದಲ್ಲಿ ಅದನ್ನು ದೃಢೀಕರಿಸುವ ಸ್ವಾತಂತ್ರ್ಯ, ಅಡುಗೆ ಸಿಬ್ಬಂದಿಗೆ ಇದೆ’ ಎಂದರು.

ಅಂಗನವಾಡಿ ಕಾರ್ಯಕರ್ತೆ ಸುವರ್ಣಾ ಸಿಂಧೆ, ಸುಮನ ಅಂತೇಶ್ವರ, ಮಲ್ಲಮ್ಮ ಹಿರೇಮಠ, ಸುಗಣಾವತಿ, ಮಂಗಲಾ ಸಂಜೀವಕುಮಾರ, ಶ್ರೀದೇವಿ ಬಾಬುರಾವ ಹರಪಳ್ಳೆ, ಕಾಂಚನಾ ಮದನೂರು, ಶಂಕುಂತಲಾ ಚ್ಯಾಂಡೇರ್ಶವರೆ, ದೇವಿಕಾ ರಾಮ ಪಂಚಾಳ, ಮುನ್ನಾ ಬಾಗವಾನ ಹಾಗೂ ವಿವಿಧ ಸಂಘದ ಮಹಿಳೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.