ADVERTISEMENT

ಕರ್ನಾಟಕ ಕಾಲೇಜಿಗೆ ಡಿಡಿಪಿಯು ಭೇಟಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 14:50 IST
Last Updated 23 ಆಗಸ್ಟ್ 2021, 14:50 IST
ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆಂಜನಯ್ಯ ಅವರು ಸೋಮವಾರ ಬೀದರ್‌ನ ಕರ್ನಾಟಕ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು
ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆಂಜನಯ್ಯ ಅವರು ಸೋಮವಾರ ಬೀದರ್‌ನ ಕರ್ನಾಟಕ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು   

ಬೀದರ್: ಪದವಿ ಪೂರ್ವ ಕಾಲೇಜು ಆರಂಭದ ಮೊದಲ ದಿನವಾದ ಸೋಮವಾರ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆಂಜನಯ್ಯ ಅವರು ಇಲ್ಲಿಯ ಕೆಆರ್‍ಇ ಸಂಸ್ಥೆ ಸಂಚಾಲಿತ ಕರ್ನಾಟಕ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದರು.

ಕೋವಿಡ್ ಕಾರಣ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಕೈಗೊಳ್ಳಲಾದ ಕ್ರಮಗಳು, ಮಕ್ಕಳ ದಾಖಲಾತಿ ಪುಸ್ತಕವನ್ನು ಪರಿಶೀಲಿಸಿದರು.

ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ, ಉಪನ್ಯಾಸಕರಾದ ಸಚಿನ್ ವಿಶ್ವಕರ್ಮ, ಸುನೀಲಕುಮಾರ ಮೂಲಗೆ ಇದ್ದರು.

ADVERTISEMENT

ವಿ.ಕೆ. ಇಂಟರ್‌ನ್ಯಾಷನಲ್: ಭೌತಿಕ ತರಗತಿ ಪ್ರಾರಂಭ

ಬೀದರ್: ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಇಲ್ಲಿಯ ವಿ.ಕೆ. ಇಂಟರ್‌ನ್ಯಾಷನಲ್ ಪ್ರೌಢಶಾಲೆಯಲ್ಲಿ ಸೋಮವಾರ 9ನೇ ಹಾಗೂ 10ನೇ ಭೌತಿಕ ತರಗತಿಗಳು ಆರಂಭಗೊಂಡವು.
ಮಾಸ್ಕ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಪಲ್ಸ್ ಆಕ್ಸಿಮೀಟರ್ ಮೂಲಕ ಆಮ್ಲಜನಕ ಮಟ್ಟ ಪರೀಕ್ಷಿಸಲಾಯಿತು. ಪಾಲಕರ ಅನುಮತಿ ಪತ್ರ ಪಡೆದು ಒಳಗೆ ಬಿಡಲಾಯಿತು.
ಬಸವ ತತ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈಜಿನಾಥ ಕಮಠಾಣೆ, ಕಾರ್ಯದರ್ಶಿ ದಿಲೀಪ್ ಕಮಠಾಣೆ, ನಿರ್ದೇಶಕಿ ವೈಶಾಲಿ ಕಮಠಾಣೆ, ವಿ.ಕೆ. ಇಂಟರ್‍ನ್ಯಾಷನಲ್ ಶಾಲೆ ಪ್ರಾಚಾರ್ಯೆ ರೋಷಮಿ ಥಾಮಸ್, ಆಡಳಿತಾಧಿಕಾರಿ ಜಿನ್ಸ್ ಥಾಮಸ್, ಪ್ರೌಢಶಾಲೆ ಶಿಕ್ಷಕಿ ಶಿವಲೀಲಾ ಟೊಣ್ಣೆ, ರವೀಂದ್ರ ದೇವಾ, ಮನೋಜಕುಮಾರ ಜೈನ್, ಮಾಣಿಕರಾಜ ಕುಲಕರ್ಣಿ, ಸತೀಶ ಬಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.