ADVERTISEMENT

ಶಾಹೀನ್‌ ಶಾಲೆಗೆ ಡಿಡಿಪಿಐ ನೋಟಿಸ್‌, ವರದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 17:54 IST
Last Updated 12 ಫೆಬ್ರುವರಿ 2020, 17:54 IST

ಬೀದರ್‌: ಜನವರಿ 21ರಂದು ಶಾಲೆಯಲ್ಲಿ ನಡೆದ ಕಾರ್ಯಕ್ರಮದ ವಿಸ್ತೃತ ವರದಿ ಕೊಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಹೀನ್‌ ಶಿಕ್ಷಣ ಸಂಸ್ಥೆಗೆ ಮತ್ತೊಂದು ನೋಟಿಸ್‌ ಜಾರಿ ಮಾಡಿದೆ.

ಉಪ ನಿರ್ದೇಶಕ ಎಚ್‌.ಸಿ.ಚಂದ್ರಶೇಖರ ಅವರು ಶಾಹೀನ್‌ ಶಿಕ್ಷಣ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗೆ ಬುಧವಾರ ನೋಟಿಸ್‌ ಜಾರಿ ಮಾಡಿ ವಿವರಣೆ ಕೇಳಿದ್ದಾರೆ.

ಶಾಹೀನ್‌ ಶಾಲೆಯಲ್ಲಿ ವಿವಾದಾತ್ಮಕ ನಾಟಕ ಪ್ರದರ್ಶನ ಮಾಡಿದ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲ ಮಾಧ್ಯಮಗಳಲ್ಲಿ ಅನೇಕ ವರದಿಗಳು ಪ್ರಕಟವಾಗುತ್ತಿವೆ.

ADVERTISEMENT

ಗೊಂದಲಕ್ಕೆ ಕಾರಣವಾದ ಅಂಶಗಳ ಬಗ್ಗೆ ವರದಿ ಕೊಡುವಂತೆ ವಾರದ ಹಿಂದೆ ಬೀದರ್‌ ಕ್ಷೇತ್ರ ಶಿಕ್ಷಣಾಧಿಕಾರಿ ಶಾಹೀನ್‌ ಶಿಕ್ಷಣ ಸಂಸ್ಥೆಗೆ ನೋಟಿಸ್‌ ಕೊಟ್ಟಿದ್ದರು.

ಅದಕ್ಕೆ ಶಾಹೀನ್‌ ಸಂಸ್ಥೆಯು ಜನವರಿ 21ರಂದ ಶಾಲಾ ವಾರ್ಷಿಕೋತ್ಸವ ನಡೆದಿಲ್ಲ. ತರಗತಿಯೊಂದರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ ಎಂದು ಉತ್ತರಿಸಿತ್ತು. ಈಗ ಡಿಡಿಪಿಐ ನೋಟಿಸ್‌ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.