ADVERTISEMENT

ನಮ್ಮೂರು ನಾವದಗೇರಿ ಜಾನಪದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 14:56 IST
Last Updated 20 ಸೆಪ್ಟೆಂಬರ್ 2021, 14:56 IST
ಬೀದರ್‌ನ ನಾವದಗೇರಿಯಲ್ಲಿ ಹಮ್ಮಿಕೊಂಡಿದ್ದ ‘ನಮ್ಮೂರು ನಾವದಗೇರಿ ಜಾನಪದ ಸಂಭ್ರಮ’ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ಉದ್ಘಾಟಿಸಿದರು, ರಾಜಕುಮಾರ ಹೆಬ್ಬಾಳೆ, ರಾಜಕುಮಾರ ಜಮಾದಾರ ವೀರಭದ್ರಪ್ಪ ಉಪ್ಪಿನ್‌, ಎಸ್‌.ವಿ.ಕಲ್ಮಠ, ಮಹಾದೇವಿ ಹೆಬ್ಬಾಳೆ, ಮಹಾರುದ್ರ ಡಾಕುಳಗಿ ಇದ್ದಾರೆ
ಬೀದರ್‌ನ ನಾವದಗೇರಿಯಲ್ಲಿ ಹಮ್ಮಿಕೊಂಡಿದ್ದ ‘ನಮ್ಮೂರು ನಾವದಗೇರಿ ಜಾನಪದ ಸಂಭ್ರಮ’ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ಉದ್ಘಾಟಿಸಿದರು, ರಾಜಕುಮಾರ ಹೆಬ್ಬಾಳೆ, ರಾಜಕುಮಾರ ಜಮಾದಾರ ವೀರಭದ್ರಪ್ಪ ಉಪ್ಪಿನ್‌, ಎಸ್‌.ವಿ.ಕಲ್ಮಠ, ಮಹಾದೇವಿ ಹೆಬ್ಬಾಳೆ, ಮಹಾರುದ್ರ ಡಾಕುಳಗಿ ಇದ್ದಾರೆ   


ಬೀದರ್‌: ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ‘ನಮ್ಮೂರು ನಾವದಗೇರಿ ಜಾನಪದ ಸಂಭ್ರಮ’ ಕಾರ್ಯಕ್ರಮ ಇಲ್ಲಿಯ ನಾವದಗೇರಿಯ ಶುಕ್ಲತೀರ್ಥ ಮಡಿವಾಳೇಶ್ವರ ಮಂದಿರದಲ್ಲಿ ನಡೆಯಿತು.

ನಿವೃತ್ತ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ಉದ್ಘಾಟಿಸಿದರು. ಕಲಬುರ್ಗಿಯ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ಮಹಾದೇವಿ ಹೆಬ್ಬಾಳೆ ಉಪನ್ಯಾಸ ನೀಡಿದರು.

ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ ಪ್ರೊ.ಎಸ್.ವಿ.ಕಲ್ಮಠ ಮಾತನಾಡಿದರು. ಶುಕ್ಲತೀರ್ಥ ಮಡಿವಾಳೇಶ್ವರ ಮಂದಿರದ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‍ನ ಅಧ್ಯಕ್ಷ ಓಂಪ್ರಕಾಶ ಬಜಾರೆ ಅಧ್ಯಕ್ಷತೆ ವಹಿಸಿದ್ದರು. ಶುಕ್ಲತೀರ್ಥ ಸೇವಾ ಸಮಿತಿಯ ಅಧ್ಯಕ್ಷ ರಾಜಕುಮಾರ ಜಮಾದಾರ ಪ್ರಾಸ್ತಾವಿಕ ಮಾತನಾಡಿದರು.

ADVERTISEMENT

ಅಶ್ವಿನಿ ಮತ್ತು ರಾಜಕುಮಾರ ಸ್ವಾಮಿ ಬಂಪಳ್ಳಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾವಿದರಾದ ಶಿವರುದ್ರಯ್ಯ ಸ್ವಾಮಿ ಗೌಡಗಾಂವ, ವಿರೂಪಾಕ್ಷಯ್ಯ ಸ್ವಾಮಿ, ವೀರೇಶ ಹಿರೇಜೇವರ್ಗಿ, ರವಿಸ್ವಾಮಿ ಗೋಟೂರ ಸಾಥ್ ನೀಡಿದರು.

ರಾಜಕುಮಾರ ಹೆಬ್ಬಾಳೆ, ಬಾಬುರಾವ್ ಮಲ್ಕಾಪುರ, ಜಗದೀಶ ಖೂಬಾ, ವೀರಭದ್ರಪ್ಪ ಉಪ್ಪಿನ್, ಭಕ್ತರಾಜ ಪಾಟೀಲ, ಸಾಯಿ ಮಡಿವಾಳ, ಶಿವಕುಮಾರ ದಾನಾ, ರಾಜಕುಮಾರ ಡೊಂಗರಗಿ, ಸಾಗರ ಗೌರ, ಬಸವರಾಜ ಬಿರಾದಾರ, ಮಲ್ಲು ಹೂಗಾರ, ನಾಗನಾಥ ಮಾನೆ, ಅನಿಲ ರಾಜಗಿರಾ, ಪ್ರಾರ್ಥನಾ ಬಿರಾದಾರ, ಶಶಿಕಲಾ ಡೊಂಗರಗಿ, ಪುಂಡಲೀಕರಾವ್ ಪಾಟೀಲ ಗುಮ್ಮಾ, ಮಲ್ಲಯ್ಯ ಸ್ವಾಮಿ ಐನೂಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.