ADVERTISEMENT

ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸುವ ಎನ್‌ಸಿಸಿ

ಎನ್‌ಸಿಸಿ ಗ್ರೂಪ್ ಕಮಾಂಡರ್‌ ಕರ್ನಲ್ ಬೀರೇಂದ್ರಕುಮಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 11:53 IST
Last Updated 19 ಫೆಬ್ರುವರಿ 2020, 11:53 IST
ಬೀದರ್‌ನ ಬಿ.ವಿ.ಭೂಮರಡ್ಡಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ್ದ ಕರ್ನಾಟಕ ಬಳ್ಳಾರಿ ಗ್ರೂಪ್‍ನ ಎನ್‌ಸಿಸಿ ಗ್ರೂಪ್ ಕಮಾಂಡರ್‌ ಕರ್ನಲ್ ಬೀರೇಂದ್ರಕುಮಾರ ಹಾಗೂ ವಿದ್ಯಾರ್ಥಿಗಳಿದ್ದರು
ಬೀದರ್‌ನ ಬಿ.ವಿ.ಭೂಮರಡ್ಡಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ್ದ ಕರ್ನಾಟಕ ಬಳ್ಳಾರಿ ಗ್ರೂಪ್‍ನ ಎನ್‌ಸಿಸಿ ಗ್ರೂಪ್ ಕಮಾಂಡರ್‌ ಕರ್ನಲ್ ಬೀರೇಂದ್ರಕುಮಾರ ಹಾಗೂ ವಿದ್ಯಾರ್ಥಿಗಳಿದ್ದರು   

ಬೀದರ್‌:‘ಎನ್‌ಸಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ದೇಶ ಪ್ರೇಮ ಬೆಳೆಸುತ್ತದೆ. ಎನ್‌ಸಿಸಿ ಕೆಡೆಟ್‌ಗಳು ಸೇನೆಗೆ ಸೇರುವ ಮೂಲಕ ದೇಶ ಸೇವೆ ಮಾಡಬೇಕು’ ಎಂದು ಕರ್ನಾಟಕ ಬಳ್ಳಾರಿ ಗ್ರೂಪ್‍ನ ಎನ್‌ಸಿಸಿ ಗ್ರೂಪ್ ಕಮಾಂಡರ್‌ ಕರ್ನಲ್ ಬೀರೇಂದ್ರಕುಮಾರ ಹೇಳಿದರು.

ಮಂಗಳವಾರ ನಗರದ ಬಿ.ವಿ.ಭೂಮರಡ್ಡಿ ಮಹಾವಿದ್ಯಾಲಯದ ಎನ್‌ಸಿಸಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಲೇಜಿನವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಬಿ.ವಿ.ಭೂಮರಡ್ಡಿ ಮಹಾ ವಿದ್ಯಾಲಯದ ಎನ್‌ಸಿಸಿ ಘಟಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಶ್ಲಾಘಿಸಿದರು.

ADVERTISEMENT

ಇದಕ್ಕೂ ಮೊದಲು ಎನ್‌ಸಿಸಿ ಕೆಡೆಟ್‌ಗಳಿಂದ ಗೌರವ ವಂದನೆ ಸ್ವೀಕರಿಸಿದರು. ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹಾದೇವಪ್ಪ ರಾಂಪುರೆ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಪ್ರಾಚಾರ್ಯ ಎಸ್.ಕೆ ಸಾತನೂರ, ಎನ್.ಸಿ.ಸಿ. ಅಧಿಕಾರಿಗಳಾದ ಮೇಜರ್ ಡಾ.ಪಿ.ವಿಠಲರಡ್ಡಿ, ಕಮಾಂಡಿಂಗ್ ಆಫೀಸರ್ ಕರ್ನಲ್ ಸುಶೀಲಕುಮಾರ ತಿವಾರಿ, ಗ್ರೂಪ್ ಕ್ಯಾಪ್ಟನ್ ಜಿ.ಆರ್.ಬಿ. ದತ್ತು, ಸುಬೇದಾರ ಮೇಜರ್ ತ್ರಿಲೋಕಸಿಂಗ್ ಬೋರಾ, ಕ್ಯಾಪ್ಟನ್ ರಾಜೇಂದ್ರ ಬಿರಾದಾರ, ಚೀಫ್ ಆಫೀಸರ್ ಮಹಮ್ಮದ್ ರಫಿ ತಾಳಿಕೋಟೆ, ಕೇರ್ ಟೇಕರ್ ಆಫೀಸರ್ ಹಾಗೂ ವೀಣಾ ಸಿಂಗೋಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.