ADVERTISEMENT

ಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ 21ಕ್ಕೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 11:00 IST
Last Updated 17 ಆಗಸ್ಟ್ 2022, 11:00 IST
ಸಂತೋಷ ಜೋಳದಾಪಕೆ
ಸಂತೋಷ ಜೋಳದಾಪಕೆ   

ಬೀದರ್: ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಗಸ್ಟ್ 21 ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ವತಿಯಿಂದ ಗೊಂಡ (ಕುರುಬ) ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಔದತಪುರದ ಮಚ್ಚೇಂದ್ರನಾಥ ಮಹಾರಾಜ ಸಾನಿಧ್ಯ ವಹಿಸುವರು. ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕ ಬಂಡೆಪ್ಪ ಕಾಶೆಂಪುರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿಜಯಕುಮಾರ ಕಾಶೆಂಪುರ, ಬಾಬು ಕಾಶೆಂಪುರ, ಮಾಜಿ ಸದಸ್ಯ ಬಾಬುರಾವ್ ಮಲ್ಕಾಪುರೆ, ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ, ರಾಜ್ಯ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ, ಬಿಡಿಎ ಮಾಜಿ ಅಧ್ಯಕ್ಷ ಮುರಳಿಧರ ಎಕಲಾರಕರ್, ಪ್ರಮುಖರಾದ ಭೀಮಸಿಂಗ್ ಮಲ್ಕಾಪುರೆ, ಬಸವರಾಜ ಮಾಳಗೆ, ರಾಜಾರಾಮ ಚಿಟ್ಟಾ, ಇಂದುಮತಿ ಚಿದ್ರಿ, ಹಣಮಂತ ಮಲ್ಕಾಪುರ, ಅಂಜಲಿ ಕೆ.ಡಿ. ಗಣೇಶ, ಬಕ್ಕಪ್ಪ ನಾಗೂರೆ, ಮಾಳಪ್ಪ ಅಡಸಾರೆ, ರವಿ ದುರ್ಗೆ, ಪೀರಪ್ಪ ಯರನಳ್ಳಿ, ಶಿವರಾಜ ಬಿರಾದಾರ, ಮಚ್ಚೇಂದ್ರನಾಥ ಖಂಡಗೊಂಡ, ಪಿ. ನಾಗಪ್ಪ, ಶರಣಪ್ಪ ದಸ್ತಗೊಂಡ, ರಮೇಶ ಪಾಟೀಲ, ವೈಜಿನಾಥ ಬಿರಾದಾರ, ಬಕ್ಕಪ್ಪ ನಿರ್ಣಾಕರ್, ಸಚ್ಚಿದಾನಂದ ಮಲ್ಕಾಪುರೆ, ಚಂದ್ರಕಾಂತ ಮೇತ್ರೆ, ತಾನಾಜಿ ತೋರಣೆಕರ್, ಬಾಬು ಸಂಗೋಳಗಿ, ಬೊಮ್ಮಗೊಂಡ ಚಿಟ್ಟಾವಾಡಿ, ಲೋಕೇಶ ಮೇತ್ರೆ, ತುಕಾರಾಮ ಚಿಮಕೋಡೆ, ಸಚಿನ್ ಮಲ್ಕಾಪುರ, ರಮೇಶ ಬಿರಾದಾರ, ದೀಪಕ್ ಚಿದ್ರಿ ಪಾಲ್ಗೊಳ್ಳುವರು.
ಸ್ಪರ್ಧಾ ಗುರು ಸ್ಟಡಿ ಸೆಂಟರ್‍ನ ಅಮೀತ್ ಸೋಲಪುರ ವಿಶೇಷ ಉಪನ್ಯಾಸ ನೀಡುವರು.
ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮಾಜದ ಮಹನೀಯರನ್ನು ಸನ್ಮಾನಿಸಲಾಗುವುದು ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಜೋಳದಾಪಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.