ADVERTISEMENT

ಕಲ್ಯಾಣ ಕರ್ನಾಟಕದ ಕಲಾ ತಂಡಗಳ ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 6:11 IST
Last Updated 27 ಜುಲೈ 2022, 6:11 IST
   

ಬೀದರ್‌: ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಸಾಂಸ್ಕೃತಿಕ ಮತ್ತು ಜನಪದ ಉತ್ಸವದ ಅಂಗವಾಗಿ ಆಯೋಜಿಸಿರುವ ಕಲಾ ತಂಡಗಳ ಭವ್ಯ ಮೆರವಣಿಗೆ ನಗರದಲ್ಲಿ ಆರಂಭವಾಗಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಚಾಲನೆ ಮೆರವಣಿಗೆಗೆ ನೀಡಿದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ, ಚಂದ್ರಶೇಖರ ಬಿರಾದಾರ, ಪ್ರತಿಭಾ ಚಾಮಾ, ಫರ್ನಾಂಡಿಸ್ ಹಿಪ್ಪಳಗಾಂವ, ಅಬ್ದುಲ್ ಜಬ್ಬಾರ್, ಶಿವಶರಣಪ್ಪ ವಾಲಿ ಹಾಗೂ ಎಸ್‌.ವಿ. ಕಲ್ಮಠ, ಹಿರಿಯ ಸಾಹಿತಿಗಳಾದ ಎಸ್‌.ಎಂ .ಜನವಾಡಕರ್, ಭಾರತಿ ವಸ್ತ್ರದ ಪಾರ್ವತಿ ಸೋನಾರೆ, ಶಂಭುಲಿಂಗ ವಾಲ್ದೊಡ್ಡಿ, ಮಹೇಶ ವಿ. ಪಾಟೀಲ್, ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಉಪಾಧ್ಯಕ್ಷ ಡಿಂಗ್ರಿ ನರೇಶ, ಸಲಹೆಗಾರ ಶ್ರಿನಿವಾಸ ಜಿ. ಕಪ್ಪಣ್ಣ ಪಾಲ್ಗೊಂಡಿದ್ದಾರೆ.

ADVERTISEMENT

ಮೆರವಣಿಗೆಯಲ್ಲಿ ಬೆಂಗಳೂರಿನ ಗೊರವ ಕುಣಿತ ತಂಡ, ಚರ್ಮವಾದ್ಯ, ಮಹಿಳಾ ಕೋಲಾಟ, ರಾಮ ಲಕ್ಷ್ಮಣ, ಡೊಳ್ಳು ಕುಣಿತ, ಹೆಜ್ಜೆ ಕುಣಿತ, ಶಹನಾಯಿ ವಾದನ, ಕರಡಿ ಮಜಲು, ಚಿಟ್ಟ ಹಲಗೆ ಮೇಳ, ಲಮಾಣಿ ನೃತ್ಯ, ಹಗಲುವೇಶ, ಮಹಿಳಾ ತಮಟೆ, ಹಲಗೆ ವಾದನ, ಕೀಲು ಕುದರೆ, ನಂದಿಧ್ವಜ, ಭಜನೆ, ವೀರಗಾಸೆ, ಚಕ್ರಿಭಜನೆ, ತತ್ವಪದ ಗಾಯನ, ಡೊಳ್ಳಿನ ಪದ, ಸುಗ್ಗಿ ಹಾಡು, ಗೀಗಿಪದ, ಬಯಲಾಟ, ಸೋಬಾನ ಪದ ಕಲಾವಿದರು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.