ADVERTISEMENT

ದೇಶ ಸೇವೆಗೂ ಮುಂದಾಗಿ: ರೇಷ್ಮಾ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 14:02 IST
Last Updated 2 ಮಾರ್ಚ್ 2019, 14:02 IST
ಬೀದರ್‌ನಲ್ಲಿ ನಡೆದ ಗುರುನಾನಕ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶೇ 100ಕ್ಕೆ 100 ರಷ್ಟು ಹಾಜರಾತಿ ಹೊಂದಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಪ್ರಮಾಣ ಪತ್ರ ವಿತರಿಸಿದರು
ಬೀದರ್‌ನಲ್ಲಿ ನಡೆದ ಗುರುನಾನಕ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶೇ 100ಕ್ಕೆ 100 ರಷ್ಟು ಹಾಜರಾತಿ ಹೊಂದಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಪ್ರಮಾಣ ಪತ್ರ ವಿತರಿಸಿದರು   

ಬೀದರ್: ‘ವೈದ್ಯ, ಎಂಜಿನಿಯರ್ ಆಗುವುದಷ್ಟೇ ಮುಖ್ಯವಲ್ಲ. ದೇಶ ಸೇವೆಗೂ ಮುಂದಾಗಬೇಕು’ ಎಂದು ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಹೇಳಿದರು.

ನಗರದ ಝೀರಾ ಫಂಕ್ಷನ್ ಹಾಲ್‌ನಲ್ಲಿ ನಡೆದ ಗುರುನಾನಕ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ ಹಾಗೂ ಸಹೋದರತ್ವ ಗುಣಗಳನ್ನು ರೂಢಿಸಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಸಂಸ್ಥೆಯ ಅಧ್ಯಕ್ಷ ಡಾ.ಎಸ್. ಬಲಬೀರಸಿಂಗ್, ಗುರುನಾನಕ ದೇವ್ ಎಂಜಿನಿಯರಿಂಗ್ ಕಾಲೇಜಿನ ಡಾ.ಬಿ.ಎಸ್. ಧಲಿವಾಲ್, ಗುರುನಾನಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಹೇಮಾ ಸುಲ್ತಾನಪೂರೆ, ದೇವ ಶಾಲೆಯ ಪ್ರಾಚಾರ್ಯೆ ಶೇಖ ಅಮಜದ್ ಅಲಿ, ಮೈಲೂರು ಶಾಖೆಯ ಪ್ರಾಚಾರ್ಯೆ ಇನಾಯತ್ ಪಾಶಾ, ಗುರುನಾನಕ ಶಾಲೆಯ ಪ್ರಾಚಾರ್ಯೆ ಪವನಾ ಪ್ರಿಯಾ, ಮುಖ್ಯ ಶಿಕ್ಷಕಿ ಆರಿಫ್ ಹಾದಿ ಉಪಸ್ಥಿತರಿದ್ದರು.

ಶೇಕಡ 100ಕ್ಕೆ 100 ರಷ್ಟು ಹಾಜರಾತಿ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.