ADVERTISEMENT

ಬಸವಕಲ್ಯಾಣ: ತಿರಂಗ ಜಾಥಾ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:17 IST
Last Updated 11 ಆಗಸ್ಟ್ 2022, 4:17 IST
ಬಸವಕಲ್ಯಾಣ ತಾಲ್ಲೂಕಿನಲ್ಲಿ ಬುಧವಾರ ವಾತಡೆ ಫೌಂಡೇಶನ್ ವತಿಯಿಂದ ತಿರಂಗ ಬೈಕ್ ಜಾಥಾ ನಡೆಸಲಾಯಿತು
ಬಸವಕಲ್ಯಾಣ ತಾಲ್ಲೂಕಿನಲ್ಲಿ ಬುಧವಾರ ವಾತಡೆ ಫೌಂಡೇಶನ್ ವತಿಯಿಂದ ತಿರಂಗ ಬೈಕ್ ಜಾಥಾ ನಡೆಸಲಾಯಿತು   

ಬಸವಕಲ್ಯಾಣ: ವಾತಡೆ ಫೌಂಡೇಶನ್ ವತಿಯಿಂದ ಆಯೋಜಿಸಿದ ಬೈಕ್ ಜಾಥಾ ಬುಧವಾರ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಸಂಚರಿಸಿತು.

ನಗರದಲ್ಲಿ ಫೌಂಡೇಶನ್ ಅಧ್ಯಕ್ಷ ಪ್ರದೀಪ ವಾತಡೆ ಚಾಲನೆ ನೀಡಿ ಸ್ವತಃ ಜಾಥಾದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಅವರು ಮಾತನಾಡಿ,‍‘ಹರ್ ಘರ್ ತಿರಂಗ ಅಭಿಯಾನವನ್ನು ಎಲ್ಲರೂ ಯಶಸ್ವಿಗೊಳಿಸಬೇಕು. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಬೇಕು. ಇದಕ್ಕಾಗಿ ಎಲ್ಲರೂ ಜನಸಾಮಾನ್ಯರಿಗೆ ತಿಳಿವಳಿಕೆ ನೀಡಬೇಕು. ಫೌಂಡೇಶನ್ ವತಿಯಿಂದ ತಾಲ್ಲೂಕಿನಾದ್ಯಂತ ಜಾಥಾ ಕೈಗೊಳ್ಳಲಾಗುತ್ತಿದೆ. ವಿವಿಧ ರಚನಾತ್ಮಕ ಕಾರ್ಯ ಸಹ ಆಯೋಜಿಸಲಾಗುತ್ತಿದೆ’ ಎಂದರು.

ADVERTISEMENT

ಜಾಥಾ ಶಿವಪುರ, ನಾರಾಯಣಪುರ, ಕಿಟ್ಟಾ, ಗೋಕುಳ, ಧನ್ನೂರ, ಮುಚಳಂಬ, ಗೋರ್ಟಾ, ಬೇಲೂರ, ಗಡಿ ಗೌಡಗಾಂವ, ಮಿರಖಲ್, ಪ್ರತಾಪುರ ಹಾಗೂ ಮೋ ರಖಂಡಿ ರಾಮತೀರ್ಥ, ಘೋಟಾಳ ಹಾಗೂ ಜಾನ ನಮುಗಳಿ ಗ್ರಾಮಗಳಲ್ಲಿ ಸಂಚರಿಸಿತು.

ನಗರಸಭೆ ಮಾಜಿ ಸದಸ್ಯ ರವಿ ಕೊಳಕೂರ, ಪ್ರಮುಖರಾದ ಬಸವರಾಜ ಕೋರಕೆ, ಮಹೇಶ ಸುಂಟನೂರೆ, ಸಂತೋಷ ಸಾಳುಂಕೆ, ಜಗನ್ನಾಥ ಪಾಟೀಲ, ಶ್ರೀಕಾಂತ ಬಡದಾಳೆ, ಸಂಗಮೇಶ ಸಜ್ಜನಶೆಟ್ಟಿ, ನೀಲೇಶ ಖೂಬಾ, ಕೃಷ್ಣಾ ಗೋಣೆ, ದೀಪಕ ಗುಡ್ಡಾ, ಸುರೇಶ ಅಮರಶೆಟ್ಟಿ, ಅನಿಲ ಸಕ್ಕರಬಾವಿ, ರವಿ ನಾವದ್ಗೇಕರ್, ಅಮರ ಬಡದಾಳೆ, ಆನಂದ ಜೀವಣೆ, ವಿಶಾಲ ಸಾಂಡೆ, ಪ್ರಭು ಕಾಡಾದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.