ADVERTISEMENT

ಚಿಲಕವಾಡಿ: ಸಂಭ್ರಮದ ಹಾಲರಿವೆ ಉತ್ಸವ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2011, 9:45 IST
Last Updated 18 ನವೆಂಬರ್ 2011, 9:45 IST
ಚಿಲಕವಾಡಿ: ಸಂಭ್ರಮದ ಹಾಲರಿವೆ ಉತ್ಸವ
ಚಿಲಕವಾಡಿ: ಸಂಭ್ರಮದ ಹಾಲರಿವೆ ಉತ್ಸವ   

ಕೊಳ್ಳೇಗಾಲ: ತಾಲ್ಲೂಕಿನ ಚಿಲಕವಾಡಿ ಶಂಭುಲಿಂಗ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ಹಾಲರಿವೆ ಉತ್ಸವ ಸಂಭ್ರಮ ಸಡಗರಗಳಿಂದ ನೆರವೇರಿತು.

ಶಂಭುಲಿಂಗೇಶ್ವರ ದೇವಾಲಯದ ಹಿಂಭಾಗದಿಂದ ಕಾವೇರಿ ಪೂಜೆ ಮೂಲಕ ಹಾಲರಿವೆ ಉತ್ಸವಕ್ಕೆ ಚಾಲನೆ ದೊರೆ ಯಿತು. ರಾತ್ರಿ ಇಡೀ ಚಿಲಕವಾಡಿ ಗ್ರಾಮದಲ್ಲಿ ಎಲ್ಲ ಬೀದಿಗಳಲ್ಲೂ ದೇವರ ಮೆರವಣಿಗೆ ನಡೆಯಿತು.

ಚಿಲಕವಾಡಿ ಶಂಭುಲಿಂಗ ದೇವಾಲ ಯದ ಮುಂಭಾಗ ಬೃಹತ್ ಜಾತ್ರೆ ನಡೆದು ರಾತ್ರಿಯಿಡಿ ಸಹಸ್ರಾರು ಭಕ್ತರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಾಲರಿವೆ ಉತ್ಸವ ಯಶಸ್ವಿಯಾಗಿ ನೆರವೇರಿಸಿದರು.

ವರ್ಣಮಯವಾಗಿ ಸಿಂಗರಿಸಲ್ಪಟ್ಟ ಬೃಹತ್ ಪಲ್ಲಕ್ಕಿಯಲ್ಲಿ ಶಂಭುಲಿಂಗೇಶ್ವರ ಹಾಗೂ ದುರ್ಗಾದೇವಿ ವಿಗ್ರಹದ ಮೆರವಣಿಗೆ ಮಂಗಳವಾರ ಬೆಳಿಗ್ಗೆ ಚಿಲಕ ವಾಡಿ ಬಸವನಗುಡಿಯಿಂದ ಪ್ರಾರಂಭ ಗೊಂಡು, ವಿವಿಧ ಸಾಂಸ್ಕೃತಿಕ ಮೇಳ ದೊಡನೆ ನೆರವೇರಿತು.

ಗ್ರಾಮದ ಯಜಮಾನರಾದ ನಾಗೇಂದ್ರ, ರಾಜು, ರಾಜೇಂದ್ರ, ಮಹಾ ದೇವಸ್ವಾಮಿ, ನಂಜುಂಡೇಗೌಡ, ನಂಜೇಗೌಡ, ಮಾದಯ್ಯ, ನಂಜಯ್ಯ, ಸುಂದ್ರ, ಸೋಮಣ್ಣ ವಿವಿಧ ಕೋಮಿನ ಮುಖಂಡರು ಹಾಜರಿದ್ದರು.
ಸುತ್ತಲ ಗ್ರಾಮಗಳಿಂದ ಅಸಂಖ್ಯಾತ ಭಕ್ತರು ಹಾಲರವೆ ಮತ್ತು ಜಾತ್ರೆಯಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು. ಯಾವುದೇ ಅಹಿತಕರ ಘಟನೆಗೆ ನಡೆಯದಂತೆ ಗ್ರಾಮಾಂತರ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.