ADVERTISEMENT

ಜಿಲ್ಲೆಯಲ್ಲಿ ಉತ್ಸಾಹಭರಿತ ಮತದಾನ

ಒಟ್ಟು ಮತದಾರರ ಸಂಖ್ಯೆ 8,30,887

​ಪ್ರಜಾವಾಣಿ ವಾರ್ತೆ
Published 13 ಮೇ 2018, 11:26 IST
Last Updated 13 ಮೇ 2018, 11:26 IST

ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ವಿಧಾನಸಭೆಯಂತೆ ಈ ಬಾರಿಯ ವಿಧಾನಸಭಾ ಚುನಾವಣೆಗೂ ಮತದಾರರಿಂದ ಉತ್ಸಾಹಭರಿತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ80.52 ರಷ್ಟು ಮತದಾನವಾಗಿದೆ. ಸಂಜೆ 5ಗಂಟೆ ವೇಳೆಗೆ ಜಿಲ್ಲೆಯಲ್ಲಿ ಒಟ್ಟು ಶೇ76.24ರಷ್ಟು ಮತದಾನವಾಗಿತ್ತು.

ಕೆಲಸಕ್ಕಾಗಿ ಗುಳೇ ಹೋಗಿದ್ದವರು ಮತದಾನದ ದಿನ ವಾಪಸ್ ಬಂದಿದ್ದಾರೆ. ಮಧ್ಯಾಹ್ನದ ನಂತರ ಮತದಾನ ಬಿರುಸು ಪಡೆದಿದೆ. ಬಹುತೇಕ ಮತಗಟ್ಟೆಗಳ ಮುಂದೆ ಉದ್ದನೆಯ ಸಾಲುಗಳು ಕಂಡು ಬಂದಿವೆ.

ADVERTISEMENT

2013ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 78.65ರಷ್ಟು ಮತದಾನವಾಗಿತ್ತು. ಶೇ 77.73ರಷ್ಟು ಮಹಿಳೆಯರು ಹಾಗೂ ಶೇ 79.54ರಷ್ಟು ಪುರುಷರು ಮತದಾನ ಮಾಡಿದ್ದರು.

ಈ ಚುನಾವಣೆಯಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚನ ಸಂಖ್ಯೆಯಲ್ಲಿ ಮತದಾನ ಮಾಡಿದ್ದರು. ಆದರೆ, ಇದಕ್ಕೂ ಹಿಂದಿನ 2008ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಪ್ರತಿಕ್ರಿಯೆ ಚುರುಕಾಗಿರಲಿಲ್ಲ. ಕೇವಲ ಶೇ 73.83ರಷ್ಟು ಮಾತ್ರ ಮತದಾನವಾಗಿತ್ತು. ಇದರಲ್ಲೂ ಪುರುಷರೇ ಮೇಲುಗೈ ಸಾಧಿಸಿದ್ದರು. ಶೇ 75.40ರಷ್ಟು ಪುರುಷರು ಮತದಾನ ಮಾಡಿದ್ದರೆ, ಶೇ 72.30ರಷ್ಟು ಮಹಿಳೆಯರು ಮಾತ್ರ ಮತದಾನ ಮಾಡಿದ್ದರು.

ಇದಕ್ಕೆ ಪೂರಕವಾಗಿ 2009ರ ಲೋಕಸಭಾ ಚುನಾವಣೆಯಲ್ಲೂ ನೀರಸ ಮತದಾನ ದಾಖಲಾಗಿತ್ತು. ಶೇ 68.18ರಷ್ಟು ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದರು. ಶೇ 69.71ರಷ್ಟು ಪುರುಷರು ಹಾಗೂ ಶೇ 66.60ಯಷ್ಟು ಮಹಿಳೆಯರು ಮತದಾನ ಮಾಡಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಶೇ 74.12ರಷ್ಟು ಪ್ರಮಾಣದಲ್ಲಿ ಮತದಾನವಾಗಿತ್ತು.

2013ರ ವಿಧಾನಸಭಾ ಚುನಾವಣೆಯಲ್ಲಿ ಇದ್ದ ಮತದಾರರ ಸಂಖ್ಯೆ 7,49,930 ಮಂದಿ. ಇವರಲ್ಲಿ 3,79,833 ಮಂದಿ ಪುರುಷರು ಹಾಗೂ 3,70,076 ಮಂದಿ ಮಹಿಳೆಯರು ಇದ್ದರು. ಇವರಲ್ಲಿ ಒಟ್ಟು ಮತದಾನ ಮಾಡಿದವರ ಸಂಖ್ಯೆ 5,89,801. ಅಂದರೆ ಶೇ 78.65ರಷ್ಟು ಮತದಾನವಾಗಿತ್ತು. 3,79,833 ಮಂದಿ ಪುರುಷರ ಪೈಕಿ 3,21,135 ಮಂದಿ ಮತದಾನ ಮಾಡಿದ್ದರೆ, 3,70,076 ಮಂದಿ ಮಹಿಳೆಯರ ಪೈಕಿ 2,87,665 ಮಂದಿ ಮಾತ್ರ ಮತದಾನ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.