ADVERTISEMENT

ತಮಿಳುನಾಡಿಗೆ ಶಾಶ್ವತವಾಗಿ ನೀರು ನಿಲ್ಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 8:25 IST
Last Updated 10 ಅಕ್ಟೋಬರ್ 2012, 8:25 IST

ಯಳಂದೂರು: `ಕಾವೇರಿ ಹಾಗೂ ಕಪಿಲಾ ನದಿಯ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡವುದನ್ನು ಶಾಶ್ವತವಾಗಿ ನಿಲ್ಲಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಭಗೀರಥ ಉಪ್ಪಾರ ಸೇವಾ ಸಮಿತಿಯ ತಾಲ್ಲೂಕು ಘಟಕದ ವತಿಯಿಂದ  ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಳೆದ ಜೂನ್‌ನಿಂದ ಅಕ್ಟೋಬರ್‌ವರೆಗೆ 40 ಟಿಎಂಸಿ ನೀರನ್ನು ಬಿಡಲಾಗಿದೆ. ಜತೆಗೆ ಕೆಆರ್‌ಎಸ್. ಹೇಮಾವತಿ, ಕಬಿನಿ, ಹಾರಂಗಿ ಜಲಾಶಯಗಳಿಂದಲೂ ನೀರನ್ನು ಬಿಟ್ಟಿದೆ. ಕಾವೇರಿ ಕಣಿವೆಯ ಜಿಲ್ಲೆಯ ಜನತಗೆ ವ್ಯವಸಾಯ ಹಾಗೂ ಕುಡಿಯಲೂ ನೀರಿನ ಕೊರತೆ ಇದ್ದರೂ ನೀರನ್ನು ಬಿಟ್ಟಿರುವುದು ಅವೈಜ್ಞಾನಿಕ ಕ್ರಮವಾಗಿದೆ. 

ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯದ ಜನಪ್ರತಿನಿಧಿಗಳು ಈ ಭಾಗದ ಜನರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗುತ್ತಾ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ತಹಶೀಲ್ದಾರ್ ಶಿವನಾಗಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸಮಿತಿಯ ಅಧ್ಯಕ್ಷ ಎಚ್. ಶಿವರಾಮು, ಎಂ. ಸಿದ್ದಪ್ಪಸ್ವಾಮಿ, ಬಂಗಾರು, ನಾರಾಯಣ, ವೈ.ಎನ್. ಮಹದೇವಶೆಟ್ಟಿ, ಎಂ. ಶಿವಣ್ಣ, ನಾಗರಾಜು, ವೈ.ಸಿ, ಮಹದೇವಸ್ವಾಮಿ, ಮಹಾದೇವಶೆಟ್ಟಿ, ಮರಿಸ್ವಾಮಿ, ರಾಮಲಿಂಗಶೆಟ್ಟಿ, ಮಹೇಶ್ ಇತರರು ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.