ADVERTISEMENT

ಪ್ರವಾಸಿಗರಿಗೆ ಹುಲಿರಾಯನ ದರ್ಶನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 5:56 IST
Last Updated 20 ಅಕ್ಟೋಬರ್ 2017, 5:56 IST
ಗುಂಡ್ಲುಪೇಟೆ ತಾಲ್ಲೂಕಿನ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಊಟಿ –ಮೈಸೂರು ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಂಡ ಹುಲಿ ಛಾಯಾಗ್ರಾಹಕ ಸುರೇಶ್‌ ಸಾಗರ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವುದು
ಗುಂಡ್ಲುಪೇಟೆ ತಾಲ್ಲೂಕಿನ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಊಟಿ –ಮೈಸೂರು ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಂಡ ಹುಲಿ ಛಾಯಾಗ್ರಾಹಕ ಸುರೇಶ್‌ ಸಾಗರ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವುದು   

ಗುಂಡ್ಲುಪೇಟೆ: ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಅ.15ರಂದು ಸಫಾರಿಗೆ ಹೋದ ಪ್ರವಾಸಿಗರಿಗೆ ಊಟಿ ಮುಖ್ಯ ರಸ್ತೆಯಲ್ಲಿ ಹುಲಿ ದರ್ಶನ ನೀಡಿದೆ. ಹುಲಿ ಸುಮಾರು 1ಕಿ.ಮೀ.ವರೆಗೂ ರಸ್ತೆಯಲ್ಲಿ ನಡೆದುಕೊಂಡು ಬಂದಿದೆ.

ಈ ದೃಶ್ಯವನ್ನು ಮೈಸೂರಿನ ಹವ್ಯಾಸಿ ಛಾಯಾಗ್ರಾಹಕ ಸುರೇಶ್ ಸಾಗರ್ ಎಂಬುವವರು ಸೆರೆಹಿಡಿದಿದ್ದಾರೆ. ಈ ರೀತಿ ಹುಲಿಯೊಂದು ಕಿಲೋಮೀಟರ್‌ವರೆಗೆ ಮುಖ್ಯರಸ್ತೆಯಲ್ಲಿಯೇ ನಡೆದುಕೊಂಡು ಬಂದಿದ್ದು ಹಿಂದೆ ನೋಡಿಲ್ಲ ಎಂದು ಇಲಾಖೆಯ ಸಫಾರಿ ವಾಹನ ಚಾಲಕರೊಬ್ಬರು ತಿಳಿಸಿದರು.

ಪ್ರವಾಸಿಗರು ಹೆಚ್ಚಳ: ಸಾಲು ರಜೆಗಳು ಬಂದಿರುವುದರಿಂದ ಬಂಡಿಪುರ ಸಫಾರಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಮಂಗಳವಾರ ಕೂಡ ಸಫಾರಿಗೆ ತೆರಳಿದವರಿಗೆ ಹುಲಿ ಕಾಣಿಸಿಕೊಂಡಿರುವುದು ಸುದ್ದಿಯಾಗಿದೆ. ಇದರ ಜತೆಗೆ, ಆನೆ, ಕರಡಿ, ಕಡವೆ, ಮುಂತಾದ ಪ್ರಾಣಿಗಳೂ ಕಾಣಿಸಿಕೊಂಡಿದ್ದು ಪ್ರವಾಸಿಗರಲ್ಲಿ ಕುತೂಹಲ ಹೆಚ್ಚಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.