ADVERTISEMENT

ಬಿಎಸ್‌ ಪಿ ಒಂದು ಜಾತಿಗೆ ಸೀಮಿತವಾಗಿಲ್ಲ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 6:31 IST
Last Updated 26 ಅಕ್ಟೋಬರ್ 2017, 6:31 IST
ಬಿಎಸ್‌ ಪಿ ಒಂದು ಜಾತಿಗೆ ಸೀಮಿತವಾಗಿಲ್ಲ
ಬಿಎಸ್‌ ಪಿ ಒಂದು ಜಾತಿಗೆ ಸೀಮಿತವಾಗಿಲ್ಲ   

ಸಂತೇಮರಹಳ್ಳಿ: ಬಿಎಸ್ ಪಿ ತತ್ವ ಸಿದ್ಧಾಂತವನ್ನು ಮೆಚ್ಚಿ ಅನೇಕ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮ ವಹಿಸಬೇಕು ಎಂದು ಬಿಎಸ್ ಪಿ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ್ ಕರೆ ನೀಡಿದರು.

ಇಲ್ಲಿನ ಕುದೇರು ರಸ್ತೆಯಲ್ಲಿ ಬುಧವಾರ ಬಿಎಸ್ ಪಿ ಕಚೇರಿ ಉದ್ಘಾಟನೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಕ್ಷವು ಒಂದೇ ಜಾತಿಗೆ ಸೀಮಿತವಾಗಿಲ್ಲ ಎಂಬುದಕ್ಕೆ ಇತರೆ ಸಮುದಾಯದ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಾಕ್ಷಿಯಾಗಿದೆ ಎಂದರು.

ADVERTISEMENT

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ಕ್ಷೇತ್ರವನ್ನು ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಬೇಕು. ಕ್ಷೇತ್ರದ ಮತದಾರರು ಇದೇ ಮೊದಲ ಬಾರಿಗೆ ಪಕ್ಷವನ್ನು ಗೆಲ್ಲಿಸಿ ರಾಜ್ಯದಲ್ಲಿಯೇ ಕ್ರಾಂತಿಕಾರ ಬೆಳವಣಿಗೆಗೆ ಕಾರಣರಾಗಬೇಕು. ಮುಂದಿನ ದಿನಗಳಲ್ಲಿ ಇಂತಹ ಸಭೆಗಳನ್ನು ಗ್ರಾಮಪಂಚಾಯಿತಿ ಮಟ್ಟದಲ್ಲಿ ನಡೆಸಬೇಕಾಗಿರುವುದರಿಂದ ಕಾರ್ಯಕರ್ತರು ಸಕ್ರಿಯವಾಗಿ ಪಕ್ಷದ ಚುವಟಿಕೆಯಲ್ಲಿ ತೊಡಗಿಸಿಕೊಂಡು ಪಕ್ಷದ ಏಳಿಗೆಗೆ ದುಡಿಯಬೇಕು ಎಂದು ತಿಳಿಸಿದರು.

ಮುಖಂಡ ಮಾದಪ್ಪ ಮಾತನಾಡಿ, ಭವಿಷ್ಯದಲ್ಲಿ ಬಿಎಸ್ ಪಿ ಯು ಒಳ್ಳೆಯ ಪಕ್ಷವಾಗಿ ಹೊರ ಹೊಮ್ಮುತ್ತಿದೆ. ಕ್ಷೇತ್ರದ ಅಭ್ಯರ್ಥಿಯು ಉತ್ತಮ ವ್ಯಕ್ತಿಯಾಗಿದ್ದಾರೆ. ಈ ಪಕ್ಷದ ಅಭ್ಯರ್ಥಿಯನ್ನು ಪದೇ ಪದೇ ಸೋಲಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಇಂದಿನ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಬಿಎಸ್ ಪಿಯನ್ನು ಮುಂಚೂಣಿಗೆ ತರಬೇಕಾಗಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಹಲವು ವೀರಶೈವ ಮುಖಂಡರು ಬಿಎಸ್ ಪಿಗೆ ಸೇರ್ಪಡೆಯಾದರು.

ಬಿಎಸ್ ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ಬ್ಲಾಕ್ ಅಧ್ಯಕ್ಷ ಗುರುರಾಜಾಚಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ನಾಗರಾಜು, ಜಯಶಂಕರ್, ಸೋಮಣ್ಣ, ಶಿವು, ಮಲ್ಲೇಶಪ್ಪ, ನಾಗರಾಜಪ್ಪ, ಕಾಂತಪ್ಪ, ಕಾಶಿಯಪ್ಪ, ನಾಗಣ್ಣ, ಸುಬ್ಬಣ್ಣ, ಮರಿಸ್ವಾಮಿ, ತಮ್ಮಯ್ಯಪ್ಪ, ಪರಶಿವಮೂರ್ತಿ, ಸಾಗರ್, ಕೃಷ್ಣಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.