ಸಂತೇಮರಹಳ್ಳಿ: ಭಗವಾನ್ ಬುದ್ಧರ ಅನುಸರಣೆಗಳನ್ನು ಪಾಲಿಸಿದರೇ ನೆಮ್ಮದಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಮಹಾವನ ಎಜುಕೇಷನಲ್ ಅಂಡ್ ಚಾರಿಟಬಲ್ ಸೊಸೈಟಿ ಅಧ್ಯಕ್ಷ ಬಂತೇ ಬುದ್ಧರತ್ನ ತಿಳಿಸಿದರು.
ಇಲ್ಲಿನ ಜ್ಞಾನ ಸಿಂಧು ವೃದ್ಧಾಶ್ರಮದಲ್ಲಿ ಮಹಾವನ ಎಜುಕೇಷನಲ್ ಅಂಡ್ ಚಾರಿಟಬಲ್ ಸೊಸೈಟಿ ಮಹಾವನ ಬುದ್ಧವಿಹಾರ ವತಿಯಿಂದ ಬುದ್ಧ ಜಯಂತಿ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೃದ್ಧರಿಗೆ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಶ್ರಮದಲ್ಲಿರುವ ವೃದ್ಧರು ನೆಮ್ಮದಿ ಜೀವನ ನಡೆಸಲು ಭಗವಾನ್ ಬುದ್ಧರ ಧ್ಯಾನ ಹಾಗೂ ಅವರ ಮಾರ್ಗ ದರ್ಶನವನ್ನು ಅನುಸರಣೆ ಮಾಡಬೇಕು. ವೃದ್ಧರು ಇರುವ ಸ್ಥಳದಲ್ಲೇ ಎಲ್ಲರ ಜೊತೆ ಹೊಂದಾಣಿಕೆಯಿಂದ ಸಂತೋಷದಿಂದ ಕಾಲ ಕಳೆಯಬೇಕು. ಮನಸ್ಸಿನಲ್ಲಿ ದುಖವನ್ನು ಆಳವಡಿಸಿಕೊಳ್ಳದೇ ಒಳ್ಳೆಯ ಆಚಾರಗಳನ್ನು ಅನುಸರಣೆ ಮಾಡಿಕೊಂಡು ಸಂತೋಷದಿಂದ ನೆಮ್ಮದಿ ಜೀವನ ಸಾಗಿಸಬೇಕು ಎಂದು ಹೇಳಿದರು.
ತಂದೆ ತಾಯಿಯನ್ನು ನೋಡಿಕೊಳ್ಳುವುದು ಪುಣ್ಯದ ಕೆಲಸವಾಗಿದೆ. ಮಕ್ಕಳು ನಮ್ಮಿಂದ ದೂರವಾಗಿದ್ದಾರೆ. ಎನ್ನುವ ಆಲೋಚನೆ ಬಿಟ್ಟು ಆಶ್ರಮದಲ್ಲಿ ನಿಮ್ಮನ್ನು ನೋಡಿಕೊಳ್ಳುವವರನ್ನೇ ನಿಮ್ಮ ಮಕ್ಕಳೆಂದು ಕಾಣಬೇಕು ಎಂದರು.
ಮುಂದಿನ ದಿನಗಳಲ್ಲಿ ತಿಂಗಳ ಹುಣ್ಣಿಮೆ ದಿನದಂದು ಆಶ್ರಮಕ್ಕೆ ಭೇಟಿ ನೀಡಲಾಗುತ್ತದೆ. ಭಗವಾನ್ ಬುದ್ಧ ಜಯಂತಿ ಮಹೋತ್ಸವ ಅಂಗವಾಗಿ ವೃದ್ಧರಿಗೆ ಅನ್ನಸಂತರ್ಪಣೆ, ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿದಂತೆ 1 ವಾರಗಳ ಕಾಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಮಹಾವನ ಎಜುಕೇಶನಲ್ ಅಂಡ್ ಚಾರಿಟಬಲ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಶಾಂತರಾಜು ಕೆಸ್ತೂರು, ನಿರ್ದೇಶಕ ಮಹೇಶ್ ಹೊನ್ನೂರು, ಉಪಾಸಕರಾದ ಸಂದೀಪ್ ಕಲ್ಬುರ್ಗಿ, ಪ್ರಮೋದ್ ಕೆಸ್ತೂರು, ಮಂಜು ಹೆಗ್ಗವಾಡಿ, ದರ್ಶನ್ ಕೆಸ್ತೂರು, ಹರ್ಷಿತ್‌ಮೌರ್ಯ, ಗೌತಮ್, ಕುದೇರು ಎಸ್.ಮಹದೇವ್, ಉಮ್ಮತ್ತೂರು ಮಹದೇವಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.