ಹನೂರು: ತಾಲ್ಲೂಕಿನ ಆಂಡಿಪಾಳ್ಯದ ಬಳಿ ರಾಜ್ಯ ಹೆದ್ದಾರಿಯಲ್ಲಿ ಒಣಗಿದ ಮರ ಬಿದ್ದ ಪರಿಣಾಮ ಭಾನುವಾರ ಬೆಳಿಗ್ಗೆ ನಾಲ್ಕು ಗಂಟೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಲೊಕ್ಕನಹಳ್ಳಿ ಒಡೆಯರ್ ಪಾಳ್ಯ ಮುಖ್ಯ ರಸ್ತೆಯ ಬೂದಿಪಡಗದ ಬಳಿ ಬರುವ ಮುಖ್ಯರಸ್ತೆಯಲ್ಲಿ ಬೆಳಗಿನ ಜಾವ ಬೃಹತ್ ಗಾತ್ರದ ಒಣಗಿದ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳು ಕೆಲವು ಗಂಟೆ ತೆರಳಲು ಸಾಧ್ಯವಾಗದೇ ಪರದಾಡುವಂತಾಯಿತು.
ಬೆಳಗಿನ ಜಾವ ನಾಲ್ಕು ಗಂಟೆಯಿಂದ ಏಳು ಗಂಟೆಯವರೆಗೆ ಈ ಭಾಗದಲ್ಲಿ ವಾಹನಗಳು ಸಂಚರಿಸಲು ಜಾಗವಿಲ್ಲದೆ ಪ್ರಯಾಣಿಕರು ಸರಿಯಾದ ಸಮಯಕ್ಕೆ ಊರಿಗೆ ತಲುಪಲಾಗದೇ ಪೇಚಿಗೆ ಸಿಲುಕುವಂತಾಯಿತು.
ಬಳಿಕ ಸಾರ್ವಜನಿಕರು ಹನೂರು ಪೊಲೀಸರಿಗೆ ತಿಳಿಸಿದಾಗ, ಅವರು ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ ನಂತರ ಸಿಬ್ಬಂದಿ ಸ್ಥಳಕ್ಕೆ ಬಂದು ಒಣ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.