ಚಾಮರಾಜನಗರ: ರಾಮಸಮುದ್ರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದು ಶಾಲಾ ಪರಿಕರಗಳನ್ನು ಧ್ವಂಸಗೊಳಿಸಿದ್ದಾರೆ.
ಶಾಲೆಯ 9 ಕೊಠಡಿಗಳ ಪೈಕಿ 6 ಕೊಠಡಿಗಳ ಬೀಗ ಹೊಡೆದು ಹಾಕಿರುವ ದುಷ್ಕರ್ಮಿಗಳು ಪೀಠೋಪಕರಣಗಳು, ಪುಸ್ತಕಗಳು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಹಾಳುಗೆಡವಿದ್ದಾರೆ.
ಜಾತಿ ಜನಗಣತಿ ಕಾರ್ಯಕ್ಕೆ ಶಾಲೆಯ ಸೀಲ್ ತೆಗೆದುಕೊಂಡು ಹೋಗಲು ಬಂದಾಗ ದಾಂಧಲೆ ನಡೆಸಿರುವುದು ಗಮನಕ್ಕೆ ಬಂದಿದೆ ಎಂದು ಪ್ರಭಾರ ಮುಖ್ಯ ಶಿಕ್ಷಕಿ ಮಾದಲಾಂಭಿಕೆ ಪ್ರಜಾವಾಣಿಗೆ ಮಾಹಿತಿ ನೀಡಿದರು.
ಹಾನಿಯ ವಿವರ:
ಮುಖ್ಯ ಶಿಕ್ಷಕರ ಕೊಠಡಿಯ ಡೋರ್ ಮುರಿದು ಅಲ್ಮೆರಾಗಳನ್ನು ಒಡೆದು ಅದರೊಳಗಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಅಡುಗೆ ಮನೆಯಲ್ಲಿ ಮಲ–ಮೂತ್ರ ಎರಚಿದ್ದು, ವಿಜ್ಞಾನ ಮಾದರಿ, ಡಾ.ರಾಧಾಕೃಷ್ಣನ್ ಭಾವಚಿತ್ರ, ಹಾಲಿನ ಪುಡಿ, ರೇಡಿಯೋ ಸಹಿತ ಹಲವು ವಸ್ತುಗಳನ್ನು ಹಾಳುಗೆಡವಾಗಿದೆ.
ಮಕ್ಕಳಿಗೆ ಬಿಸಿಯೂಟ ತಯಾರಿಸಲು ದಾಸ್ತಾನು ಕೊಠಡಿಯಲ್ಲಿ ಇರಿಸಲಾಗಿದ್ದ ಆಹಾರ ಪದಾರ್ಥಗಳನ್ನು ಸಂಪೂರ್ಣ ನಾಶ ಮಾಡಲಾಗಿದ್ದು ಅಡುಗೆ ಎಣ್ಣೆಯನ್ನು ಬೇಳೆಯ ಚೀಲದೊಳಗೆ ಚೆಲ್ಲಲಾಗಿದೆ, ಹಾಲಿನ ಪುಡಿಯನ್ನು ಕೊಠಡಿಯು ತುಂಬೆಲ್ಲ ಎರಚಲಾಗಿದೆ ಎಂದು ಮಾದಲಾಂಭಿಕೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.