ADVERTISEMENT

ಪ್ರವಾಹ ಸಂತ್ರಸ್ತರಿಗೆ ಲಕ್ಷ ಚಪಾತಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 14:50 IST
Last Updated 17 ಆಗಸ್ಟ್ 2019, 14:50 IST
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕಳುಹಿಸುವುದಕ್ಕಾಗಿ ಮಹಿಳೆಯರು ಚಪಾತಿ ತಯಾರಿಸುತ್ತಿರುವುದು
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕಳುಹಿಸುವುದಕ್ಕಾಗಿ ಮಹಿಳೆಯರು ಚಪಾತಿ ತಯಾರಿಸುತ್ತಿರುವುದು   

ಚಾಮರಾಜನಗರ: ನಗರದ ಗಾನಕವಿ ಪ್ರತಿಷ್ಠಾನವು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಒಂದು ಲಕ್ಷ ಚಪಾತಿಯನ್ನು ಸಿದ್ಧಪಡಿಸುತ್ತಿದೆ.

ನಗರದ ಶಂಕರಪುರ ಬಡಾವಣೆಯಲ್ಲಿ ಶ್ರೀರಾಮ ಮಂದಿರದಲ್ಲಿ ಶನಿವಾರ ಎಣ್ಣೆ ಹಾಕದ ಚಪಾತಿ ತಯಾರಿಸುವ ಕಾರ್ಯ ಆರಂಭವಾಗಿದ್ದು, ಭಾನುವಾರವೂ ನಡೆಯಲಿದೆ.

ಪತಂಜಲಿ ಯೋಗ ಶಿಕ್ಷಣ ಸಮಿತಿಯ 50 ಮಹಿಳೆಯರು ಹಾಗ ನಗರದ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಸಂಘ-ಸಂಸ್ಥೆ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ADVERTISEMENT

ಎಣ್ಣೆ ಹಾಕದೆ ಚಪಾತಿ ತಯಾರಿಸಿ ಅದನ್ನು ಸುರಕ್ಷಿತವಾಗಿ ಸಂರಕ್ಷಿಸಿ ಸೋಮವಾರ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ತಲುಪಿಸಲಾಗುವುದು ಎಂದು ಗಾನಕವಿ ‍ಪ್ರತಿಷ್ಠಾನದ ಅಧ್ಯಕ್ಷ ಎಚ್‌.ಬಿ.ವಿಶ್ವ ಕುಮಾರ್‌ ಹೇಳಿದ್ದಾರೆ.

ರಾಜೇಶ್, ಯೋಗ ಪ್ರಕಾಶ್, ರೇಣುಕಾ, ಸುವರ್ಣಕ್ಕ, ರಾಧಾಕೃಷ್ಣ ವೀರಶೈವ ನೌಕರರಸಂಘದ ಅಧ್ಯಕ್ಷ ಪರಮೇಶ್ವರಪ್ಪ, ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.