ADVERTISEMENT

ಹನೂರು: ಚಿರತೆ ದಾಳಿಗೆ ಹಸು ಸಾವು

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 15:35 IST
Last Updated 23 ಜೂನ್ 2025, 15:35 IST
<div class="paragraphs"><p> ಚಿರತೆ </p></div>

ಚಿರತೆ

   

ಹನೂರು: ತಾಲ್ಲೂಕಿನ ಹುಣಸೆಪಾಳ್ಯದಲ್ಲಿ ರೈತ ಜಡೇರುದ್ರ ಎಂಬುವವರ ಸೇರಿದ ಹಸುವನ್ನು ಚಿರತೆಯೊಂದು ದಾಳಿ ಮಾಡಿ ಕೊಂದಿದೆ.

ಜಡೇರುದ್ರ ಅವರು ಸಮೀಪದ ಜಯಪ್ಪ ಎಂಬುವವರ ಜಮೀನಿನಲ್ಲಿ ಹಸು ಮೇಯಲು ಬಿಟ್ಟಿದ್ದರು. ಮೇಯುತ್ತಿದ್ದ ಹಸು ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ. ದಾಳಿ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟಿದೆ.

ADVERTISEMENT

‘ಹನೂರು ತಾಲ್ಲೂಕಿನಲ್ಲಿ ಅಲ್ಲಲ್ಲಿ ಚಿರತೆ ದಾಳಿ ಮುಂದುವರೆದಿದೆ. ಹಸು, ಮೇಕೆ, ಕುರಿಗಳನ್ನು ಬೇಟೆಯಾಡಿ ಕೊಲ್ಲುತ್ತಿವೆ. ಇದರಿಂದ ಜನರು ಭಯದಲ್ಲೇ ಜೀವನ ನಡೆಸಬೇಕಾದ ಅನಿವಾರ್ಯ ಎದುರಾಗಿದೆ. ಅಧಿಕಾರಿಗಳು ಚಿರತೆ ಹಾವಳಿಗೆ ಕಡಿವಾಣ ಹಾಕಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ

ಪರಿಹಾರಕ್ಕಾಗಿ ಮನವಿ: ಹಸು ನಂಬಿ ಜೀವನ ಸಾಗಿಸುತ್ತಿದ್ದ ರೈತರಿಗೆ ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು, ರೈತರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.