ಚಾಮರಾಜನಗರ: ರಾಮಸಮುದ್ರ ಬಳಿಯ ಚಾಮುಲ್ ಹಾಲು ಒಕ್ಕೂಟದ ಉಪ ಕೇಂದ್ರದ ಅವರಣದಲ್ಲಿ ಶನಿವಾರ ಸ್ವಚ್ಛತಾ ಸೇ ಸಹಕಾರ ಅಭಿಯಾನ ನಡೆಯಿತು.
ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಜಿಲ್ಲಾ ಹಾಲು ಒಕ್ಕೂಟ, ಸಹಕಾರ ಇಲಾಖೆ ಮತ್ತು ಸಹಕಾರ ಸಂಘಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡ ಪ್ರಸಾದ್ ಸ್ವಚ್ಛತಾ ಸೇ ಸಹಕಾರ ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿದ್ದರೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಹಕಾರಿ ಬಂಧುಗಳು ಹಾಗು ಅಧಿಕಾರಿಗಳು ಭಾಗವಹಿಸಿ ಶ್ರಮದಾನ ಮಾಡಿರುವುದು ಶ್ಲಾಘನೀಯ. ಮಹಾತ್ಮ ಗಾಂಧಿಜಿ ಅವರ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಎಲ್ಲರೂ ಸಕಾರಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಚಾಮುಲ್ ನಿರ್ದೇಶಕರಾದ ವೈ.ಸಿ.ನಾಗೇಂದ್ರ, ಸದಾಶಿವ ಮೂರ್ತಿ, ಒಕ್ಕೂಟದ ನಿರ್ದೇಶಕರಾದ ಹರದನಹಳ್ಳಿ ಸುಂದರರಾಜ್, ಮಹದೇವಪ್ರಭು, ರವಿ, ಪ್ರಭುಸ್ವಾಮಿ, ಅಮಚವಾಡಿ ನಾಗಸುಂದರ್, ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ರಾಜಕುಮಾರ್, ಸಹಕಾರ ಸಂಘಗಳ ಉಪ ನಿಬಂಧಕಿ ಜ್ಯೋತಿ ಅರಸು, ಸಹಾಯಕ ನಿಬಂಧಕಿ ಶೋಭಾ, ಅಧೀಕ್ಷಕ ನಾಗೇಶ, ಶಿಲ್ಪಾ, ಅಭಿವೃದ್ದಿ ಅಧಿಕಾರಿ ಸುಭಾಷಿನಿ, ನಾಗೇಶ್, ಶಿಲ್ಪ, ಸಹಾಯಕ ವ್ಯವಸ್ಥಾಪಕ ಡಾ.ಅಮರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನುಜ, ಮ್ಯಾನೇಜರ್ ಮಲ್ಲಿಕಾರ್ಜುನಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.