ಚಿರತೆ
ಸಂತೇಮರಹಳ್ಳಿ: ಸಮೀಪದ ಲಿಂಗಣಾಪುರ ಗ್ರಾಮದಲ್ಲಿ ಬುಧವಾರ ರಾತ್ರಿ ಹಸುವೊಂದರ ಮೇಲೆ ಚಿರತೆ ದಾಳಿ ಕೊಂದುಹಾಕಿದೆ. ಗ್ರಾಮದ ನಟರಾಜು ₹30 ಸಾವಿರ ಬೆಳೆ ಬಾಳುವ ಹಸುವನ್ನು ಮನೆ ಹೊರ ಭಾಗದಲ್ಲಿ ಕಟ್ಟಿಹಾಕಿದ್ದಾಗ ಚಿರತೆ ದಾಳಿ ನಡೆಸಿದೆ.
ಆಲೂರು ಹೊಮ್ಮ ಗ್ರಾಮದಲ್ಲಿಯೂ ಮೇಯುತ್ತಿದ್ದ 2 ಕುರಿಗಳ ಮೇಲೆ ಚಿರತೆ ದಾಳಿ ಮಾಡಿ ಕೊಂದುಹಾಕಿದೆ. ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ರೈತ ನಟರಾಜು ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಹಾಗೂ ಚಿರತೆ ಹಿಡಿಯುವ ನಿಟ್ಟಿನಲ್ಲಿ ಗ್ರಾಮದಲ್ಲಿ ಬೋನ್ ಇಡಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.