ADVERTISEMENT

ಮಹದೇಶ್ವರ ಬೆಟ್ಟ: ರಾತ್ರಿ ತಂಗಲು ಅವಕಾಶ, ದರ್ಶನ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 11:36 IST
Last Updated 8 ಜುಲೈ 2021, 11:36 IST
ಮಲೆ ಮಹದೇಶ್ವರಸ್ವಾಮಿ ದೇವಾಲಯ
ಮಲೆ ಮಹದೇಶ್ವರಸ್ವಾಮಿ ದೇವಾಲಯ   

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ತೀರ್ಥ ಕ್ಷೇತ್ರ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಗುರುವಾರದಿಂದ (ಜುಲೈ 8) ಜಾರಿಗೆ ಬರುವಂತೆ ಸ್ವಾಮಿಯ ದರ್ಶನ ಅವಧಿಯನ್ನು ಪರಿಷ್ಕರಿಸಲಾಗಿದ್ದು, ಬೆಳಿಗ್ಗೆ 5ರಿಂದ ರಾತ್ರಿ 9 ಗಂಟೆಯವರೆಗೆ ಅವಕಾಶ ನೀಡಲಾಗಿದೆ.

ಭಕ್ತರಿಗೆ ರಾತ್ರಿ ಬೆಟ್ಟದಲ್ಲಿ ತಂಗಲೂ ಅವಕಾಶ ಕಲ್ಪಿಸಲಾಗಿದೆ. ಗುರುವಾರ ರಾತ್ರಿಯಿಂದಲೇ ಕೊಠಡಿಗಳನ್ನು ಕಾಯ್ದಿರಿಸಲು ಅನುವು ಮಾಡಲಾಗಿದೆ. ಆನ್‌ಲೈನ್‌ ಮೂಲಕ (www.mmhillstemple.com) ಹಾಗೂ ನೇರವಾಗಿ ಬೆಟ್ಟಕ್ಕೆ ಬಂದು ಕೊಠಡಿಗಳನ್ನು ಕಾಯ್ದಿರಿಸಬಹುದು ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾಸೋಹ, ಸೇವೆ ಇಲ್ಲ: ದರ್ಶನ ಅವಧಿ ವಿಸ್ತರಿಸಲಾಗಿದ್ದರೂ, ದೇವಾಲಯದಲ್ಲಿ ದಾಸೋಹ ವ್ಯವಸ್ಥೆ, ಮುಡಿ ಸೇವೆ ಸೇರಿದಂತೆ ಇತರ ಸೇವೆಗಳು, ವಿಶೇಷ ಪೂಜೆ, ಉತ್ಸವಗಳು ಹಾಗೂ ಪ್ರಸಾದ ವಿತರಣೆ ಇನ್ನೂ ಆರಂಭಿಸಿಲ್ಲ. ಬೆಟ್ಟದಲ್ಲಿ ಆಹಾರಕ್ಕಾಗಿ ಭಕ್ತರು ಖಾಸಗಿ ಹೋಟೆಲ್‌ಗಳನ್ನು ಅವಲಂಬಿಸಬೇಕಾಗಿದೆ.

ADVERTISEMENT

‘ಭಕ್ತರು ಸುರಕ್ಷಿತ ಅಂತರ‌ ಕಾಪಾಡುವುದು, ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಸುವುದು ಕಡ್ಡಾಯ. ಬೆಟ್ಟದಲ್ಲಿ ಜನಸಂದಣಿಗೆ ಅವಕಾಶ ಇಲ್ಲ’ ಎಂದು ಜಯವಿಭವ ಸ್ವಾಮಿ ಅವರು ಹೇಳಿದ್ದಾರೆ.

ಮಾಹಿತಿಗೆಸಹಾಯವಾಣಿ ಸಂಖ್ಯೆ 1860 425 4350 ಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.