ADVERTISEMENT

ವಿದ್ಯುತ್‌ ಚಾಲಿತ ರೈಲು ಸಂಚಾರ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 17:10 IST
Last Updated 30 ಸೆಪ್ಟೆಂಬರ್ 2022, 17:10 IST
ಪ್ರಯೋಗಾರ್ಥ ಸಂಚಾರ ನಡೆಸಿದ ವಿದ್ಯುತ್‌ ಚಾಲಿತ ರೈಲಿಗೆ ರೈಲ್ವೆ ಅಧಿಕಾರಿಗಳು ಚಾಮರಾಜನಗರ ರೈಲು ನಿಲ್ದಾಣದಲ್ಲಿ ಪೂಜೆ ಸಲ್ಲಿಸಿದರು
ಪ್ರಯೋಗಾರ್ಥ ಸಂಚಾರ ನಡೆಸಿದ ವಿದ್ಯುತ್‌ ಚಾಲಿತ ರೈಲಿಗೆ ರೈಲ್ವೆ ಅಧಿಕಾರಿಗಳು ಚಾಮರಾಜನಗರ ರೈಲು ನಿಲ್ದಾಣದಲ್ಲಿ ಪೂಜೆ ಸಲ್ಲಿಸಿದರು   

ಚಾಮರಾಜನಗರ: ನಗರದಿಂದ ಮೈಸೂರಿಗೆ ಶುಕ್ರವಾರ ನಡೆದ ವಿದ್ಯುತ್‌ ಚಾಲಿತ ರೈಲು ಸಂಚಾರ ಪರೀಕ್ಷೆ ಯಶಸ್ವಿಯಾಗಿದೆ.

ಹೊಸದಾಗಿ ನಿರ್ಮಿಸಿರುವ ವಿದ್ಯುತ್‌ ರೈಲು ಮಾರ್ಗದ ಪರೀಕ್ಷೆಗಾಗಿ ರೈಲ್ವೆ ಇಲಾಖೆಯು ಪ್ರಯೋಗಾರ್ಥ ಸಂಚಾರ ಏರ್ಪಡಿಸಿತ್ತು.

ಮೈಸೂರಿನಿಂದ ವಿದ್ಯುತ್‌ ಚಾಲಿತ ರೈಲು ಎಂಜಿನ್‌ ಮಾತ್ರ ಬಂದಿತ್ತು. ಮಧ್ಯಾಹ್ನ 2.30ಗೆ ನಗರದಿಂದ ಮೈಸೂರಿಗೆ ಹೊರಟಿದ್ದ ದಸರಾ ವಿಶೇಷ ರೈಲಿಗೆ ವಿದ್ಯುತ್‌ ಚಾಲಿತ ಎಂಜಿನ್‌ ಅಳವಡಿಸಿ ಓಡಿಸಲಾಯಿತು.

ADVERTISEMENT

ನಗರದಿಂದ ಹೊರಟ ರೈಲು ಪ್ರತಿಗಂಟೆಗೆ ಗರಿಷ್ಠ 106 ಕಿ.ಮೀ ವೇಗದಲ್ಲಿ ಸಂಚರಿಸಿದ್ದು, ಕೇವಲ 45 ನಿಮಿಷಗಳಲ್ಲಿ ಮೈಸೂರು ತಲುಪಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ರೈಲು ಹೊರಡುವುದಕ್ಕೂ ಮುನ್ನ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿದ್ಯುತ್‌ ಚಾಲಿತ ರೈಲಿಗೆ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.