ಯಳಂದೂರು: ಡಾ. ಎಚ್.ಸಿ. ಮಹದೇವಪ್ಪ ಜಾತ್ಯೀತೀತ ನಾಯಕರಾಗಿ, ಎಲ್ಲ ಸಮಾಜದ ಜೊತೆಗೆ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಡಾ.ಮಹದೇವಪ್ಪ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಕಿನಕಹಳ್ಳಿ ರಾಚಯ್ಯ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಚಿವ ಮಹದೇವಪ್ಪ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಸಕರಾಗಿ ಹಾಗೂ ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಹಲವು ದಶಕಗಳಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಾ ಬಂದಿದ್ದಾರೆ ಎಂದರು.
ಮುಖಂಡರಾದ ಮದ್ದೂರು ನಾರಾಯಣ, .ಜನಾರ್ಧನ್, ಸೋಮಣ್ಣ, ಚಕ್ರವರ್ತಿ, ಪುಟ್ಟಸುಬ್ಬಪ್ಪ, ಪ.ಪಂ. ಸದಸ್ಯರಾದ ಮಹೇಶ್, ಶ್ರೀನಿವಾಸ್, ರಾಜಣ್ಣ, ಲಿಂಗರಾಜು, ಮಹಾದೇವ, ಶಿವಪ್ರಕಾಶ್, ಶ್ರೀನಿವಾಸ್, ಉಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.