ಸಂತೇಮರಹಳ್ಳಿ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಮೊಮ್ಮದ್ ಅಪಾನ್ ಎಂಬಾತನನ್ನು ತೆಳ್ಳನೂರು ಗ್ರಾಮದಲ್ಲಿ ಸಂತೇಮರಹಳ್ಳಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಈತ ತೆಳ್ಳನೂರು ಹಾಗೂ ಆಲಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಪಡಿತರ ಅಕ್ಕಿಯನ್ನು ಜನರಿಂದ ಖರೀದಿಸಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ. ಖಚಿತ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿ 1,569 ಕೆ.ಜಿ ಪಡಿತರ ಅಕ್ಕಿ ಹಾಗೂ ಸಾಗಣೆ ಮಾಡಲು ಬಳಸಿದ ಆಟೊವನ್ನು ವಶಪಡಿಸಿಕೊಳ್ಳಲಾಗಿದೆ.
ಪಿಎಸ್‌ಐ ತಾಜುದ್ದೀನ್, ಆಹಾರ ನಿರೀಕ್ಷ ಚಿಕ್ಕಣ್ಣ, ಸಿಬ್ಬಂದಿ ಆರ್.ಎಂ. ಮಹದೇವಸ್ವಾಮಿ, ಬಸವಣ್ಣ, ಎಸ್.ಹೇಮಂತ್ ಕುಮಾರ್, ರಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.