ಸಂತೆಮರಹಳ್ಳಿ: ಸಮೀಪದ ಉಮ್ಮತ್ತೂರು ಗ್ರಾಮದ ದಾಸನೂರು ಕರಿಕಲ್ಲು ಕ್ವಾರಿಯಲ್ಲಿ ಗುರುವಾರ ಚಿರತೆ ಬೋನಿಗೆ ಬಿದ್ದಿದೆ.
ಉಮ್ಮತ್ತೂರು, ದಾಸನೂರು ಸುತ್ತಮುತ್ತಲ ಗ್ರಾಮಗಳಲ್ಲಿ ಒಂದು ವಾರದ ಹಿಂದೆ ಚಿರತೆ 4 ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ದಾಸನೂರು ಕರಿಕಲ್ಲು ಕ್ವಾರಿ ಬಳಿ ಚಾಮರಾಜನಗರ ಅರಣ್ಯ ಇಲಾಖೆಯಿಂದ ಬೋನ್ ಹಾಕಲಾಗಿತ್ತು.
ಗುರುವಾರ ಬೋನಿಗೆ ಚಿರತೆ ಬಿದ್ದಿದೆ. ಸ್ಥಳಕ್ಕೆ ಚಾಮರಾಜನಗರದ ಡಿಆರ್‌ಎಫ್‌ಗಳಾದ ಗೌರಿಶಂಕರ್, ಚಂದ್ರಕುಮಾರ್, ಗಾರ್ಡ್‌ಗಳಾದ ಪೃಥ್ವಿರಾಜು, ಶ್ವೇತಾದ್ರಿ, ಸಿಬ್ಬಂದಿ ಕುಮಾರ್, ರೇವಣ್ಣ, ಮಹೇಶ್ ಸ್ಥಳಕ್ಕೆ ಹಾಜರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.