ADVERTISEMENT

ಕೊಳ್ಳೇಗಾಲ | ವಿವಿಧ ಪಕ್ಷಗಳನ್ನು ತೊರೆದು 50ಕ್ಕೂ ಹೆಚ್ಚು ಯುವಕರು BJP ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 2:52 IST
Last Updated 26 ಆಗಸ್ಟ್ 2025, 2:52 IST
<div class="paragraphs"><p> ಬಿಜೆಪಿ ಬಾವುಟ</p></div>

ಬಿಜೆಪಿ ಬಾವುಟ

   

ಕೊಳ್ಳೇಗಾಲ: ಇಲ್ಲಿನ ಬಸ್ತೀಪುರ, ಉಪ್ಪಾರ ಮೋಳೆ ಬಡಾವಣೆಯ 50ಕ್ಕೂ ಹೆಚ್ಚು ಯುವಕರು ಭಾರತೀಯ ಜನತಾ ಪಾರ್ಟಿಗೆ ಸೋಮವಾರ ಸೇರ್ಪಡೆಯಾದರು.

ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಪಕ್ಷ ತೊರೆದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹಾಗೂ ಮಾಜಿ ಶಾಸಕ ಎಸ್.ಬಾಲರಾಜು ನೇತೃತ್ವದಲ್ಲಿ ಸೇರ್ಪಡೆಗೊಂಡರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಎನ್.ಮಹೇಶ್, ಇಷ್ಟಪಟ್ಟು ಯುವಕರು ಬಿಜೆಪಿ ಸೇರ್ಪಡೆಯಾಗಿರುವುದು ನಿಜಕ್ಕೂ ಸಂತೋಷದ ವಿಷಯ. ಈ ಯುವಕರು ಸ್ವಂತ ದುಡಿಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರ ಹಿಡಿಯುವರು’ ಎಂದರು.

ಪಕ್ಷದ ಅಸ್ತಿತ್ವಕ್ಕೆ ಎಲ್ಲಾ ಕಡೆ ಕಾರ್ಯಕರ್ತರು ತಳಮಟ್ಟದಿಂದ ಉತ್ತಮವಾಗಿ ಸಂಘಟನೆ ಮಾಡುತ್ತಿದ್ದಾರೆ.‌ ನಮ್ಮ ಗುರಿ ಭ್ರಷ್ಟ ಸರ್ಕಾರ ಕಾಂಗ್ರೆಸ್ ನಿರ್ಮೂಲನೆ ಮಾಡುವುದಾಗಿದೆ ಎಂದು ತಿಳಿಸಿದರು.

ಬಿಜೆಪಿ ಎಸ್‌ಸಿ ಮಾರ್ಚಾ ಅಧ್ಯಕ್ಷ ಸಿದ್ದಪ್ಪಾಜಿ, ಮುಖಂಡರು ಸೋಮಣ್ಣ ಉಪ್ಪಾರ್, ಕೆ.ಕೆ.ಮೂರ್ತಿ, ಆಗಸ್ಟಿನ್, ಶಂಕರ್ ಹಾಗೂ ಬಿಜೆಪಿ ಸೇರ್ಪಡೆಗೊಂಡ ಮೋಳೆ ಬಡಾವಣೆಯ ರಾಜೇಶ್, ನವೀನ, ರಾಜು, ದರ್ಶನ್, ಅಭಿ, ರಘು, ಕಿರಣ್, ರವಿ, ಮುಡಿಗುಂಡ ಬಡಾವಣೆಯ ರಾಜು, ಧನುಷ್, ಮಣಿ, ಪ್ರಜ್ಜು, ಸಂತೋಷ, ಜಗ್ಗು, ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.