ಹನೂರು: ತಾಲ್ಲೂಕಿನ ಪೊನ್ನಾಚಿ ಗ್ರಾಮಕ್ಕೆ ಬರುವ ಸಾರಿಗೆ ಬಸ್ಸು ಆಗಾಗ ಕೆಟ್ಟು ನಿಲ್ಲುತ್ತಿದ್ದು ಈ ಮಾರ್ಗದ ಪ್ರಯಾಣಿಕರು ದಿನನಿತ್ಯ ಪರದಾಡುವಂತಾಗಿದೆ.
ಹನೂರಿನಿಂದ ಪ್ರತಿನಿತ್ಯ ಸಾರಿಗೆ ಬಸ್ಸು ಬರುತ್ತಿದ್ದು, ಗ್ರಾಮಸ್ಥರು, ವಿದ್ಯಾರ್ಥಿಗಳು ಇದೇ ಬಸ್ಸನ್ನು ಅವಲಂಬಿಸಿದ್ದಾರೆ. ಆದರೆ, ಈ ಬಸ್ಸು ವಾರಕ್ಕೆ ಎರಡು ಬಾರಿ ಕೆಟ್ಟು ನಿಲ್ಲುತ್ತದೆ.
‘ಈ ಕಾರಣದಿಂದಲೇ ಬಸ್ಸು ಈಗಾಗಲೇ ಎರಡು ಮೂರು ಬಾರಿ ಅಪಘಾತವಾಗಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಆದರೂ, ಸಾರಿಗೆ ಇಲಾಖೆಯವರು ಇದೇ ಮಾರ್ಗಕ್ಕೆ ಇದೇ ಬಸ್ ನಿಯೋಜಿಸುತ್ತಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಸೋಮವಾರ ಹನೂರಿನಿಂದ ಮಧ್ಯಾಹ್ನ ಪೊನ್ನಾಚಿಗೆ ಹೊರಟ ಬಸ್ಸು ತಾಳುಬೆಟ್ಟದ ಎರಡನೇ ತಿರುವಿನಲ್ಲಿ ಅಕ್ಸಲ್ ಕಟ್ಟಾಗಿ ಬಸ್ ನಿಂತಿದೆ. ಅದೃಷ್ಟವಾಸತ್ ಇಳಿಜಾರಿನಲ್ಲಿ ಆಗಿದ್ದರೆ ಹೆಚ್ಚಿನ ಪ್ರಾಣಪಾಯ ಸಂಭವಿಸುತ್ತಿತ್ತು. 15 ದಿನಗಳ ಹಿಂದೆ ಇದೇ ಬಸ್ ಬ್ರೇಕ್ ವಿಫಲವಾಗಿ ಅಪಘಾತವಾಗಿತ್ತು. ಪ್ರತಿದಿನ ಪ್ರಯಾಣ ಮಾಡುವ ಶಿಕ್ಷಕರು ಪ್ರಾಣಭಯದಿಂದ ಸಂಚರಿಸುತ್ತಿದ್ದು, ಅವರಿಗೂ ಅನಾನುಕೂಲಗಳಾಗಿವೆ’ಎಂದರು.
‘ಈ ಬಗ್ಗೆ ಜಿಲ್ಲಾ ಸಾರಿಗೆ ಇಲಾಖೆ ವ್ಯವಸ್ಥಾಪಕರು ಹಾಗೂ ಡಿಪೋ ವ್ಯವಸ್ಥಾಪಕರು ಬಸ್ ಬದಲಾಯಿಸಬೇಕು. ಇಲ್ಲದಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ಸಾರಿಗೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ’ ಎಂದು ಪೊನ್ನಾಚಿ ಸ್ನೇಹಜೀವಿ ರಾಜ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.