ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ನಿರಂತರವಾಗಿ ಬಿದ್ದ ಬಿರುಗಾಳಿ ಮಳೆಗೆ ಬಾಳೆ ಬೆಳೆ ನೆಲಕಚ್ಚಿದ ಘಟನೆ ಮಂಚಹಳ್ಳಿ ಹಾಗೂ ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಮಂಚಹಳ್ಳಿ ಗ್ರಾಮದ ವೀರೂಪಾಕ್ಷ ಎಂಬುವವರ ಜಮೀನಿನಲ್ಲಿ ಬಿರುಗಾಳಿಗೆ ಸುಮಾರು 500ಕ್ಕೂ ಅಧಿಕ ಬಾಳೆ ನೆಲಕಚ್ಚಿದೆ. ಜೊತೆಗೆ ಶೆಟ್ಟಹಳ್ಳಿ ಗ್ರಾಮದಲ್ಲಿ ಮಹೇಶ್ ಗೌಡ ಎಂಬ ರೈತನ 100ಕ್ಕೂ ಅಧಿಕ ಬಾಳೆ ನಾಶವಾಗಿದೆ. ಇದರಿಂದ ಮಾಲೀಕರಿಗೆ ಲಕ್ಷಾಂತರ ಹಣ ನಷ್ಟ ಉಂಟಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಈಚೆಗೆ ತಾಲ್ಲೂಕಿನ ದಕ್ಷಿಣದ ಶೀಲವಂತಪುರ, ಕಡತಾಳಕಟ್ಟೆಹುಂಡಿ, ದೇಪಾಪುರ, ಸೋಮನಪುರ, ಕೊಡಸೋಗೆ ಇನ್ನೂ ಹಲವು ಗ್ರಾಮಗಳಲ್ಲಿ ಬಾಳೆಬೆಳೆ ಹೆಚ್ಚಿನ ಪ್ರಮಾಣದಲ್ಲಿ ನೆಲಕಚ್ಚಿತ್ತು. ಈಗ ಗಾಳಿ ಬೀಸುವ ಕಾರಣ ಬಾಳೆ ಬೆಳೆಗಾರರು ಆತಂಕಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.