ADVERTISEMENT

ಹನೂರು, ಮಹದೇಶ್ವರ ಬೆಟ್ಟ ಭಾಗದಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 15:31 IST
Last Updated 5 ಏಪ್ರಿಲ್ 2021, 15:31 IST
ಹನೂರು ತಾಲ್ಲೂಕಿನ ಮಾರ್ಟಳ್ಳಿಯಲ್ಲಿ ಸೋಮವಾರ ಸಂಜೆ ಬಿರುಸಿನ ಮಳೆಯಾಗಿದೆ
ಹನೂರು ತಾಲ್ಲೂಕಿನ ಮಾರ್ಟಳ್ಳಿಯಲ್ಲಿ ಸೋಮವಾರ ಸಂಜೆ ಬಿರುಸಿನ ಮಳೆಯಾಗಿದೆ   

ಚಾಮರಾಜನಗರ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಮವಾರ ಸಂಜೆ ಮಳೆಯಾಗಿದೆ. ಮಹದೇಶ್ವರಬೆಟ್ಟ, ಮಾರ್ಟಳ್ಳಿ ಸೇರಿದಂತೆ ಹನೂರು ತಾಲ್ಲೂಕಿನ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

ಜಿಲ್ಲೆಯಾದ್ಯಂತ ಸೋಮವಾರ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇತ್ತು. ಸಂಜೆ ಹೊತ್ತಿಗೆ ಜೋರಾದ ಗಾಳಿಯೂ ಬೀಸುತ್ತಿತ್ತು. ಚಾಮರಾಜನಗರದಲ್ಲಿ ಬೀಸಿದ ಬಿರುಗಾಳಿಗೆ ಸೋಮಣ್ಣ ಲೇಔಟ್‌ನಲ್ಲಿ ತೆಂಗಿನಮರ, ವಿದ್ಯುತ್‌ ಕಂಬಗಳು ಮುರಿದು ಬಿದ್ದವು. ರಾತ್ರಿ ಏಳು ಗಂಟೆಯ ಸುಮಾರಿಗೆ ಮತ್ತೊಮ್ಮೆ ಗಾಳಿ ಬೀಸಿ, ಐದರಿಂದ ಹತ್ತು ನಿಮಿಷದ ಕಾಲ ಚದುರಿದಂತೆ ಮಳೆ ಸುರಿದಿದೆ. ಯಳಂದೂರು ಭಾಗದಲ್ಲಿ ತುಂತುರು ಮಳೆಯಾಗಿದೆ.

ಹನೂರು ವರದಿ:ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸೋಮವಾರ ಮಧ್ಯಾಹ್ನ ಹಾಗೂ ಸಂಜೆ ಒಂದು ತಾಸಿಗೂ ಹೆಚ್ಚು ಕಾಲ ಮಳೆಯಾಗಿದೆ.

ADVERTISEMENT

ಮಾರ್ಟಳ್ಳಿಗ್ರಾಮದ ಸುತ್ತಮುತ್ತ ಸೋಮವಾರಸಂಜೆಉತ್ತಮಮಳೆಯಾಗಿದ್ದು, ಹನೂರು, ಪಿ.ಜಿ.ಪಾಳ್ಯ, ಕೊಪ್ಪ ಗಾಜನೂರು, ರಾಮಾಪುರ ಹಾಗೂ ಇನ್ನಿತರ ಕಡೆಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿದಿದೆ.

ಮಹದೇಶ್ವರ ಬೆಟ್ಟದಲ್ಲೂ ಸಂಜೆ 20 ನಿಮಿಷಗಳ ಕಾಲ ಸಾಧಾರಣ ಮಳೆಯಾಗಿದೆ.

ತಂಪೆರದ ಮಳೆ: ಹನೂರು ತಾಲ್ಲೂಕಿನ ಜನರು ಬಿಸಿಲಿನ ಝಳಕ್ಕೆ ಬಸವಳಿದಿದ್ದರು. ರೈತರು ಕೂಡ ಮಳೆಯ ನಿರೀಕ್ಷೆಯಲ್ಲಿದ್ದರು. ಮಾರ್ಟಳ್ಳಿ ಭಾಗದಲ್ಲಿ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದು, ಈ ಮಳೆಯಿಂದ ಅವರಿಗೆ ಕೊಂಚ ಅನುಕೂಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.