ADVERTISEMENT

ಹೊಲದಲ್ಲಿದ್ದ ಗಾಂಜಾ ಗಿಡ ವಶ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 4:10 IST
Last Updated 1 ನವೆಂಬರ್ 2020, 4:10 IST

ಮಹದೇಶ್ವರ ಬೆಟ್ಟ: ಸಮೀಪದ ಪಡಸಲನತ್ತ ಗ್ರಾಮದಲ್ಲಿ ಮೆಣಸಿನಗಿಡದ ಮಧ್ಯದಲ್ಲಿ ಬೆಳೆಸಿದ್ದ 15 ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಬೇಡಗಂಪಣ ಸಮುದಾ ಯದಮಾದೇಶ ಅಲಿಯಾಸ್ ಬೇಳೆ ಮಾದೇಶ ಬಂಧಿತ ಆರೋಪಿ. ಒಟ್ಟು 7.5 ಕೆಜಿ ಗಾಂಜಾವನ್ನು ವಶಪಡಿಸಿಕೊಂಡ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಮೀನಿನಲ್ಲಿ ಮೆಣಸಿಗಿಡದ ಮಧ್ಯೆ ಸುಮಾರು 15 ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿದ್ದು, ಖಚಿತ ಮಾಹಿತಿಯ ಮೇರೆಗೆ ಡಿವೈಎಸ್ಪಿ ನೇತೃತ್ವದ ತಂಡ ದಾಳಿ ನಡೆಸಿ ಸುಮಾರು 7.5 ಕೆಗಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಆರೋಪಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಪೊಲೀಸ್ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ನಾಗರಾಜು, ಇನ್‌ಸ್ಪೆಕ್ಟರ್ ರಮೇಶ್, ಪಿಎಸ್‌ಐ ವೀರಣ್ಣಾರಾಧ್ಯ, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ರಾಚಪ್ಪ, ಬಾಬು, ಪರಶಿವ, ಪ್ರಭು ಕಂದಾಯ ಇಲಾಖೆ ಮಹದೇವಸ್ವಾಮಿ, ಗೋಪಿನಾಥಂ ಅರಣ್ಯ ರಕ್ಷಕ ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.