ADVERTISEMENT

ಸಂತೇಮರಹಳ್ಳಿ: ಅಂಗನವಾಡಿ ಆವರಣಕ್ಕೆ ಬಂದ ನಾಗರಹಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 13:45 IST
Last Updated 12 ಜೂನ್ 2025, 13:45 IST
ಸಂತೇಮರಹಳ್ಳಿ ಸಮೀಪದ ಹೊಸಮೋಳೆ ಗ್ರಾಮದ ಅಂಗನವಾಡಿ ಕೇಂದ್ರದ ಆವರಣಕ್ಕೆ ಬಂದ ನಾಗರ ಹಾವನ್ನು ಹಿಡಿದ ಸ್ನೇಕ್ ಮಹೇಶ್
ಸಂತೇಮರಹಳ್ಳಿ ಸಮೀಪದ ಹೊಸಮೋಳೆ ಗ್ರಾಮದ ಅಂಗನವಾಡಿ ಕೇಂದ್ರದ ಆವರಣಕ್ಕೆ ಬಂದ ನಾಗರ ಹಾವನ್ನು ಹಿಡಿದ ಸ್ನೇಕ್ ಮಹೇಶ್   

ಸಂತೇಮರಹಳ್ಳಿ: ಸಮೀಪದ ಹೊಸಮೋಳೆ ಗ್ರಾಮದ ಅಂಗನವಾಡಿ ಕೇಂದ್ರದ ಆವರಣಕ್ಕೆ ಗುರುವಾರ ಬಂದ ನಾಗರಹಾವನ್ನು ಸಂತೇಮರಹಳ್ಳಿಯ ಸ್ನೇಕ್ ಮಹೇಶ್ ಹಿಡಿದು, ರಕ್ಷಿಸದರು.

ಗ್ರಾಮದ ಅಂಗನವಾಡಿ ಕೇಂದ್ರವು ಎಂದಿನಂತೆ ನಡೆಯುತ್ತಿದ್ದ ವೇಳೆಯಲ್ಲಿ ಆವರಣದಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿದೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಕ್ಕಳು ಆತಂಕಕ್ಕೆ ಒಳಗಾದರು. ತಕ್ಷಣ ಗ್ರಾಮಸ್ಥರು ಉರಗ ತಜ್ಞ ಸಂತೇಮರಹಳ್ಳಿಯ ಸ್ನೇಕ್ ಮಹೇಶ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್ ಹಾಗೂ ಸ್ನೇಕ್ ಮಂಜು ನಾಗರಹಾವನ್ನು ಹಿಡಿದು ಅಂಗನವಾಡಿ ಕೇಂದ್ರದವರ ಆತಂಕವನ್ನು ದೂರ ಮಾಡಿದರು.

ಮಕ್ಕಳು ಅಕ್ಷರ ಕಲಿಯುವ ಅಂಗನವಾಡಿ ಕೇಂದ್ರ ಹಾಗೂ ಶಾಲೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೊಠಡಿಯ ಸುತ್ತಲೂ ಯಾವುದೇ ಬಿಲಗಳು ಹಾಗೂ ಕಳೆ ಗಿಡಗಳನ್ನು ಬೆಳೆಸಬಾರದು. ಸ್ವಚ್ಛತೆ ಇಲ್ಲದಿದ್ದರೇ ಹಾವುಗಳು ವಾಸಿಸುತ್ತವೆ. ಅಂಗನವಾಡಿ ಕೇಂದ್ರದ ಪರಿಸರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.