ಚಾಮರಾಜನಗರ: ಲೋಕಸಭಾ ಚುನಾವಣೆಗಾಗಿ 25 ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನಾ ಕಾರ್ಯ ಶುಕ್ರವಾರ ನಡೆದಿದ್ದು, ಮೂವರ ನಾಮಪತ್ರ ತಿರಸ್ಕೃತಗೊಂಡಿದೆ. 22 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ.
ಪಕ್ಷೇತರ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದ್ದ ಗುರುಲಿಂಗಯ್ಯ, ಸಿ. ರಾಜು ಹಾಗೂ ಸಮಾಜವಾದಿ ಜನತಾ ಪಾರ್ಟಿಯ (ಕರ್ನಾಟಕ) ಚಾಮದಾಸಯ್ಯ ಅವರ ನಾಮಪತ್ರಗಳು ತಿರಸ್ಕ್ರತವಾಗಿವೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾ ಅಧಿಕಾರಿ ಸಿ.ಟಿ.ಶಿಲ್ಪಾ ನಾಗ್ ಹೇಳಿದ್ದಾರೆ.
ಕ್ರಮ ಬದ್ಧನಾಮಪತ್ರಗಳು: ಎಂ.ಕೃಷ್ಣಮೂರ್ತಿ (ಬಿಎಸ್‌ಪಿ), ಎಸ್.ಬಾಲರಾಜು (ಬಿಜೆಪಿ), ಸುನಿಲ್ ಬೋಸ್ (ಕಾಂಗ್ರೆಸ್), ಸಿ.ಎಂ.ಕೃಷ್ಣ (ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ), ನಿಂಗರಾಜು ಎಸ್. (ಕರ್ನಾಟಕ ಜನತಾ ಪಕ್ಷ), ಪ್ರಸನ್ನ ಕುಮಾರ್ ಬಿ. (ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ)), ಕಂದಳ್ಳಿ ಮಹೇಶ್ (ಕರ್ನಾಟಕ ರಾಷ್ಟ್ರ ಸಮಿತಿ), ಸುಮ.ಎಸ್. (ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷ), ಪಕ್ಷೇತರ ಅಭ್ಯರ್ಥಿಗಳಾದ ಕದಂಬ ನಾ. ಅಂಬರೀಷ್, ನಟರಾಜು, ಎಂ. ನಾಗೇಂದ್ರಬಾಬು, ನಿಂಗರಾಜು ಜಿ., ನಿಂಗರಾಜು ಜೆ., ಪಟಾಸ್ ಪ್ರದೀಪ್ ಕುಮಾರ್ ಎಂ., ಬಲ್ಲಯ್ಯ (ಬಾಲು), ಮಹದೇವಸ್ವಾಮಿ. ಬಿ.ಎಂ (ಪಂಪಿ), ಜಿ.ಡಿ.ರಾಜಗೋಪಾಲ (ಎಚ್.ಡಿ.ಕೋಟೆ), ರಾಜು.ಕೆ, ಸಿ.ಶಂಕರ ಅಂಕನಶೆಟ್ಟಿಪುರ, ಸಣ್ಣಸ್ವಾಮಿ, ಎಚ್.ಕೆ.ಸ್ವಾಮಿ ಹರದನಹಳ್ಳಿ, ಸುಭಾಷ್ ಚಂದ್ರ. ಕೆ, ಅವರ ನಾಮಪತ್ರಗಳು ಕ್ರಮಬದ್ದವಾಗಿವೆ.
ನಾಮಪತ್ರ ವಾಪಸ್ ಪಡೆಯಲು ಇದೇ 8 ಕೊನೆಯ ದಿನವಾಗಿದೆ.
ಸಾರ್ವಜನಿಕರಿಗೆ ನಿರ್ಬಂಧ: ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಾಮಪತ್ರ ಪರಿಶೀಲನಾ ಕಾರ್ಯ ನಡೆಯುತ್ತಿದ್ದುದರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕರು ಜಿಲ್ಲಾಡಳಿತ ಭವನಕ್ಕೆ ತೆರಳುವುದನ್ನು ನಿರ್ಬಂಧಿಸಲಾಗಿತ್ತು. ಮಾಧ್ಯಮ ಪ್ರತಿನಿಧಿಗಳಿಗೂ ಅವಕಾಶ ನೀಡಲಿಲ್ಲ.
ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಗೇಟ್‌ನಲ್ಲೇ ಪೊಲೀಸರು ಜನರನ್ನು ತಡೆದು ‘ಮಧ್ಯಾಹ್ನ 3 ಗಂಟೆಯ ನಂತರ ಬನ್ನಿ’ ಎಂದು ಹೇಳಿ ಕಳುಹಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.