ADVERTISEMENT

ಚಾಮರಾಜನಗರ: 258 ಮಂದಿಗೆ ಕೋವಿಡ್‌ ದೃಢ, ಆರು ಸಾವು

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 15:25 IST
Last Updated 5 ಜೂನ್ 2021, 15:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಶನಿವಾರ 258 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 267 ಮಂದಿ ಸೋಂಕುಮುಕ್ತರಾಗಿದ್ದಾರೆ.

ಶುಕ್ರವಾರ ಸಂಜೆ 6 ಗಂಟೆಯಿಂದ ಶನಿವಾರ 6 ಗಂಟೆಯವರೆಗಿನ 24 ಗಂಟೆಗಳ ಅವಧಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಕೋವಿಡ್‌ನಿಂದ ನಾಲ್ವರು, ಕೋವಿಡ್‌ಯೇತರ ಕಾರಣದಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಸದ್ಯ 2,862 ಸಕ್ರಿಯ ಪ್ರಕರಣಗಳು ಇವೆ. 58 ಮಂದಿ ಐಸಿಯುನಲ್ಲಿದ್ದಾರೆ. 85 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿದ್ದಾರೆ.

ADVERTISEMENT

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 27,988ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 24,664ಕ್ಕೆ ಏರಿದೆ.

ಶನಿವಾರ 1,360 ಮಂದಿಯ ಕೋವಿಡ್‌ ಪರೀಕ್ಷಾ ವರದಿಗಳು ಬಂದಿದ್ದು, 1,084 ಮಂದಿಯ ವರದಿ ನೆಗೆಟಿವ್‌ ಆಗಿದೆ. 276 ಮಂದಿಗೆ ಸೋಂಕು ಖಚಿತವಾಗಿದೆ.

ದೃಢಪಟ್ಟ ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 76, ಗುಂಡ್ಲುಪೇಟೆ 58, ಕೊಳ್ಳೇಗಾಲ 42, ಹನೂರು 48 ಮತ್ತು ಯಳಂದೂರು ತಾಲ್ಲೂಕಿನ 30 ಪ್ರಕರಣಗಳು ಸೇರಿವೆ. ಎರಡು ಪ್ರರಕರಣಗಳು ಹೊರ ಜಿಲ್ಲೆಯದ್ದು.

ಗುಣಮುಖರಾದ 267 ಮಂದಿಯಲ್ಲಿ 213 ಮಂದಿಕೋವಿಡ್‌ ಕೇರ್‌ ಕೇಂದ್ರದಲ್ಲಿ‌ದ್ದರು. 54 ಮಂದಿ ಮನೆ ಆರೈಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.