ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)
ಮಹದೇಶ್ವರ ಬೆಟ್ಟ: ಹಣದ ವಿಚಾರವಾಗಿ ಗಂಡನ ಜೊತೆ ಮುನಿಸಿಕೊಂಡ ಪತ್ನಿ ಮಲೆ ಮಹದೇಶ್ವರ ಬೆಟ್ಟದ ಕಾಡೊಲ ಗ್ರಾಮದ ಸುಶೀಲಾ (30), ಮಕ್ಕಳಾದ ಚಂದ್ರ (7) ಹಾಗೂ ಮಗಳು ದಿವ್ಯಾ (11) ಎಂಬುವರ ಜೊತೆ ಭಾನುವಾರ ಸಂಜೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು.
ಇವರಿಗೆ ಇದೇ ಗ್ರಾಮದ ಮಹೇಶ್ ಬಿನ್ ಮಾದಯ್ಯ ಎಂಬುವನ ಜೊತೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ಸೋಮವಾರ ಬೆಳಿಗ್ಗೆ ಮಗಳು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಮನೆಯವರು ಹುಡುಕಾಟ ನಡೆಸಿದರು.
ಸೋಮವಾರ ಮಾದಯ್ಯ ಎಂಬುವರ ಜಮೀನಿನ ತೆರೆದ ಬಾವಿಯಲ್ಲಿ ಮೃತದೇಹಗಳು ಪತ್ತೆಯಾದವು. ಈ ಸಾವಿಗೆ ನನ್ನ ಅಳಿಯನೇ ಕಾರಣ ಎಂದು ಈರಣ್ಣ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸರು ಆರೋಪಿ ಮಹೇಶನನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.