ADVERTISEMENT

ಗೌರಿಬಿದನೂರು: ಬಿಗಿ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 6:54 IST
Last Updated 6 ಜನವರಿ 2014, 6:54 IST

ಗೌರಿಬಿದನೂರು: ಪಟ್ಟಣದ ಮುನ್ಸಿಪಲ್‌ ಪ್ರೌಢಶಾಲೆಯಲ್ಲಿ ಭಾನುವಾರ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾ­ರಿಗಳ ಚುನಾವಣೆ ನಡೆಯಿತು.

ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆ ಜರುಗದಿರಲಿ ಎಂದು ಎಲ್ಲೆಡೆ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಮತದಾನಕ್ಕೆ  ಒಕ್ಕಲಿಗರ ಸಂಘದ ಗುರುತಿನ ಚೀಟಿ ಕಡ್ಡಾಯ­ಗೊಳಿಸಲಾ­ಗಿದ್ದರಿಂದ ಅದನ್ನು ಹೊಂದಿದವರಿಗೆ ಮಾತ್ರವೇ ಮತಗಟ್ಟೆ ಕೇಂದ್ರದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿತ್ತು.

ಮತಗಟ್ಟೆ ಕೇಂದ್ರದ ಸುತ್ತಲೂ ಭಾರಿ ಸಂಖ್ಯೆಯಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಜಮಾಯಿಸಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಕೈಗಳನ್ನು ಮುಗಿದು, ಸಂಜ್ಞಾ ಭಾಷೆ ಮೂಲಕ ಮತಯಾಚಿಸಿದರು. ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ನಡೆದ ಮತದಾನ ಪ್ರಕಿ್ರಯೆ ಇತರ ಜನರಿಗೂ ತೀವ್ರ ಕುತೂಹಲ ಕೆರಳಿಸಿತ್ತು. ಮತದಾನದ ಕೊನೆ ಕ್ಷಣದವರೆಗೂ ಮತಗಟ್ಟೆ ಕೇಂದ್ರದ ಸುತ್ತಮುತ್ತ ಜನದಟ್ಟಣೆ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT