ADVERTISEMENT

ಮೆಕ್ಕೆಜೋಳ ಬೆಳೆದ ರೈತ ಕಂಗಾಲು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2011, 10:20 IST
Last Updated 2 ನವೆಂಬರ್ 2011, 10:20 IST
ಮೆಕ್ಕೆಜೋಳ ಬೆಳೆದ ರೈತ ಕಂಗಾಲು
ಮೆಕ್ಕೆಜೋಳ ಬೆಳೆದ ರೈತ ಕಂಗಾಲು   

ಗೌರಿಬಿದನೂರು: ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ  ಸತತವಾಗಿ ಸುರಿ ಯುತ್ತಿರವ ಮಳೆಯಿಂದ ಅನುಕೂಲ ಕ್ಕಿಂತ  ಅನಾನುಕೂಲವೇ ಹೆಚ್ಚಿದೆ. ಈಗ ಮಳೆ ಸುರಿಯುತ್ತಿದ್ದರೂ ಕೃಷಿ ಚಟುವಟಿಕೆಗೆ ಯಾವುದೇ ರೀತಿಯಲ್ಲೂ ಪ್ರಯೋಜನವಿಲ್ಲ ಎಂದು ರೈತರು ಹೇಳುತ್ತಿದ್ದಾರೆ.

ತಾಲ್ಲೂಕಿನಲ್ಲಿ ಮೆಕ್ಕೆಜೋಳವನ್ನು ಹೆಚ್ಚು ಬೆಳೆಯಲಾಗುತ್ತದೆ. ಮುಂಗಾ ರಿನ ಪ್ರಾರಂಭದ ಮಳೆಗೆ ಶೇ 20ರಷ್ಟು ಬಿತ್ತನೆ ಮಾಡಿರುವ ಬೆಳೆಗಳು ಈಗ ಕಟಾವಿಗೆ ಬಂದಿವೆ. ಆದರೆ ಸತತವಾಗಿ ಸುರಿಯುತ್ತಿರುವ  ಮಳೆಯಿಂದ ಕಟಾವಾದ ಜೋಳವನ್ನು ಒಣಗಿಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲ. ದನಕರು ಗಳಿಗೆ ಮೇವು ಸಂಗ್ರಹಿಸಲು ಆಗುತ್ತಿಲ್ಲ. ಮಳೆಗೆ ಬೆಳೆ ಎಲ್ಲವೂ ನೆನೆದು ಹಾಳಾಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತ ಹನುಮಂತ ನಾಯಕ `ಪ್ರಜಾವಾಣಿ~ಗೆ ತಿಳಿಸಿದರು.

ಒಂದು ತಿಂಗಳು ಮುಂಚಿತವಾಗಿ ಮಳೆಯಾಗಿದ್ದರೆ, ಉತ್ತಮ ಬೆಳೆ ಮತ್ತು ಇಳುವರಿ ಪಡೆಯಲು ಸಾಧ್ಯವಾಗು ತಿತ್ತು. ಈಗ ಬಂದಿರುವ ಶೇ 10ರಷ್ಟು ಬೆಳೆ ಸಾಕಾಗುವುದಿಲ್ಲ. ಮಳೆ ಬರುತ್ತಿ ರುವ ಕಾರಣ ಶೇ 50ರಷ್ಟು ರಾಗಿ ಬೆಳೆ ಬರಬಹುದು.  ಅದರೆ ಮೆಕ್ಕೆ ಜೋಳಕ್ಕೆ ಈ ಮಳೆಯಿಂದ ಪ್ರಯೋಜನವಾಗು ವುದಿಲ್ಲ. ಬೆಳಗಾಗಿ ನಾವು ಮಾಡಿರುವ ಖರ್ಚು ಕೂಡ ವಾಪಸ್ ಬರುವುದಿಲ್ಲ. ನಮ್ಮ ಕಷ್ಟ ಯಾರ ಮುಂದೆ ಹೇಳಿಕೊಳ್ಳಬೇಕು~ ಎಂದು ಅವರು ನೊಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.