ADVERTISEMENT

`ಯೋಚಿಸಿ, ಮತ ಚಲಾಯಿಸಿ'

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 10:14 IST
Last Updated 6 ಏಪ್ರಿಲ್ 2013, 10:14 IST
ಚಿಂತಾಮಣಿಯ ಕನಂಪಲ್ಲಿ ವೀರಾಂಜನೇಯಸ್ವಾಮಿ ದೇಗುಲದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದ ಶಾಸಕ ಡಾ.ಎಂ.ಸಿ.ಸುಧಾಕರ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದರು.
ಚಿಂತಾಮಣಿಯ ಕನಂಪಲ್ಲಿ ವೀರಾಂಜನೇಯಸ್ವಾಮಿ ದೇಗುಲದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದ ಶಾಸಕ ಡಾ.ಎಂ.ಸಿ.ಸುಧಾಕರ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದರು.   

ಚಿಂತಾಮಣಿ: ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಸುತ್ತಿರುವ ಪ್ರಜಾ ಪ್ರಭುತ್ವದ ಪದ್ದತಿಯನ್ನೇ ಬುಡಮೇಲು ಮಾಡುತ್ತಿರುವ ಶಕ್ತಿಗಳ ವಿರುದ್ದ ಜನತೆ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳಬೇಕೆಂದು ಶಾಸಕ ಡಾ.ಎಂ.ಸಿ.ಸುಧಾಕರ್ ಮನವಿ ಮಾಡಿದರು.

ನಗರದ ಹೊರವಲಯದ ಕನಂಪಲ್ಲಿಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಪೂಜೆ ಸಲ್ಲಿಸುವ ಮೂಲಕ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವ ಶಕ್ತಿಗಳ ವಿರುದ್ದ ಪ್ರಜ್ಞಾವಂತರು, ಚಿಂತಕರು, ಬುದ್ಧಿಜೀವಿಗಳು  ಜನತೆಗೆ ಜಾಗೃತಿ ಮೂಡಿಸಬೇಕಾಗಿದೆ. ಪ್ರಜಾತಂತ್ರ ವ್ಯವಸ್ಥೆಯನ್ನು ಎತ್ತಿಹಿಡಿಯಲು ಕೆಲಸ ಮಾಡುವುದಾಗಿ ತಿಳಿಸಿದರು.

ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಮತವನ್ನು ಕೇಳಲಾಗುವುದು ಎಂದರು.
ಅಂಬಾಜಿದುರ್ಗ ಹೋಬಳಿ, ಮುಂಗಾನಹಳ್ಳಿ ಹೋಬಳಿ, ಕೈವಾರ ಹೋಬಳಿ ಹಾಗೂ ಕಸಬಾ ಹೋಬಳಿಯ ಪ್ರಚಾರದ ನಂತರ ನಗರದಲ್ಲಿ ಚುನಾವಣೆ ಪ್ರಚಾರವನ್ನು ನಡೆಸಲಾಗುವುದು. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದರು.

ಶಾಸಕರ ತಾಯಿ ಶಾಂತಮ್ಮ ಮತ್ತು ಪತ್ನಿ ಮುಖಂಡರಾದ  ಮುನಿಶಾಮಿರೆಡ್ಡಿ, ಲಕ್ಷ್ಮಿದೇವನಕೋಟೆ ನಾರಾಯಣಸ್ವಾಮಿ, ಟಿ.ಶ್ರಿನಿವಾಸ್, ಕೋನಪ್ಪಲ್ಲಿ ವೆಂಕಟಶಿವಾರೆಡ್ಡಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಬೆಲ್ಲ ವಶ; ಆರೋಪಿ ಸೆರೆ
ಬಾಗೇಪಲ್ಲಿ: ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಸುಮಾರು 80 ಮೂಟೆಗಳ ಕೊಳಕು ಬೆಲ್ಲವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡು, ಆರೋಪಿಯೊಬ್ಬನನ್ನು ಬಂಧಿಸಿದ ಘಟನೆ ಶುಕ್ರವಾರ ಪಟ್ಟಣ ಹೊರವಲಯದ ಈರಾಪುರ ಕ್ರಾಸ್‌ನಲ್ಲಿ ಶುಕ್ರವಾರ ನಡೆದಿದೆ. ಆಂಧ್ರಪ್ರದೇಶದ ಗೋರಂಟ್ಲ ನಿವಾಸಿ ಮಹೇಶ್ (35) ಬಂಧಿತ. ಸಾಗಣೆ ಮಾಡುತ್ತಿದ್ದ 80 ಮೂಟೆಗಳಷ್ಟು ಕೊಳಕು ಬೆಲ್ಲವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ತಿಮ್ಮೇಗೌಡತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.