ADVERTISEMENT

ಶಾಶ್ವತ ನೀರಾವರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 8:50 IST
Last Updated 11 ಅಕ್ಟೋಬರ್ 2012, 8:50 IST

ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಘಟನೆಯ ಸದಸ್ಯರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಸಂಚಾಲಕಿ ರತ್ನಮ್ಮ, `ಬಯಲುಸೀಮೆ ಜಿಲ್ಲೆಗಳಿಗೆ ತಕ್ಷಣವೇ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಿ~ ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರವು ಪದೇ ಪದೇ ಭರವಸೆಗಳನ್ನು ನೀಡುವುದರ ಬದಲು ಯೋಜನೆ ಅನುಷ್ಟಾನಗೊಳಿಸಲು ಮುಂದಾಗಬೇಕು ಎಂದು ಅವರು ತಿಳಿಸಿದರು.

ಸಂಘಟನೆಯ ಮುಖಂಡರಾದ ಸಿ.ಎಂ.ಮೂರ್ತಿ, ಎನ್.ಲಕ್ಷ್ಮಿನಾರಾಯಣ, ಅಮರಾವತಿ, ಚನ್ನರಾಯಪ್ಪ, ವಿ.ಗೋಪಾಲ್, ನಾರಾಯಣಪ್ಪ, ಲಕ್ಷ್ಮಿನಾರಾಯಣ, ಕದಿರಪ್ಪ, ವೆಂಕಟಲಕ್ಷ್ಮಮ್ಮ, ಶಿವಣ್ಣ, ಮುನಿಕೃಷ್ಣ, ಆಂಜನಪ್ಪ, ಸುಜಾತಾ ಮತ್ತಿತರರು ಪ್ರತಿಭಟನಾ ಮೆರವಣಿಗೆಯಲ್ಲಿಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.