ADVERTISEMENT

ಮಳೆ: ನೆಲಕ್ಕುರುಳಿದ ಅರಳಿ ಮರ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 2:00 IST
Last Updated 29 ನವೆಂಬರ್ 2020, 2:00 IST
ಗುಡಿಬಂಡೆ ಪಟ್ಟಣ ಹೊರವಲಯದ ಗ್ರಾಮ ದೇವತೆ ಏಡುಗರ ಅಕ್ಕಮ್ಮ ದೇವಾಲಯದ ಬಳಿ ಅರಳಿ ಮರ ನೆಲಕ್ಕುರುಳಿದೆ
ಗುಡಿಬಂಡೆ ಪಟ್ಟಣ ಹೊರವಲಯದ ಗ್ರಾಮ ದೇವತೆ ಏಡುಗರ ಅಕ್ಕಮ್ಮ ದೇವಾಲಯದ ಬಳಿ ಅರಳಿ ಮರ ನೆಲಕ್ಕುರುಳಿದೆ   

ಗುಡಿಬಂಡೆ: ನಿವಾರ್‌ ಚಂಡಮಾರುತದಿಂದ ತುಂತುರು ಮಳೆ ಬೀಳುತ್ತಿದ್ದು ಪಟ್ಟಣ ಹೊರವಲಯದ ಗ್ರಾಮದೇವತೆ ಏಡುಗರ ಅಕ್ಕಮ್ಮ ದೇವಾಲಯದ ಬಳಿಯ ಬೃಹತ್ ಅರಳಿ ಮರ ಬೇರುಸಹಿತ ನೆಲಕ್ಕುರುಳಿದೆ. ದೇವಾಲಯದ ಮುಂಭಾಗ ಹಾಗೂ ಮರದ ಕೆಳಗೆ ನಿಲ್ಲಿಸಲಾಗಿದ್ದ ವಾಹನಗಳಿಗೆ ಹಾನಿಯಾಗಿದೆ.

ತಾಲ್ಲೂಕಿನಲ್ಲಿ ಬಹುಪಾಲು ಜೋಳ, ರಾಗಿ, ಫಸಲು ಕಟಾವಿಗೆ ಬಂದಿದ್ದು ಮಳೆಯಿಂದ ರೈತರಿಗೆ ತೊಂದರೆ ಆಗಿದೆ. ತೀವ್ರ ನಷ್ಟ ಅನುಭವಿಸುವಂತಾಗಿದೆ ಎಂದು ಬ್ರಾಹ್ಮಣರಹಳ್ಳಿ ಗೋವಿಂದಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT