ADVERTISEMENT

ಲಾಕ್‌ಡೌನ್‌: ನಿಯಮ ಪಾಲಿಸದ ಜನ

ಅಧಿಕಾರಿಗಳಿಂದ ಮುಂಜಾಗ್ರತಾ ಕ್ರಮ ಮತ್ತು ಜಾಗೃತಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 16:38 IST
Last Updated 30 ಮಾರ್ಚ್ 2020, 16:38 IST
ಚಿಂತಾಮಣಿಯ ಜೋಡಿ ರಸ್ತೆಯ ಮಾರುಕಟ್ಟೆಯ ಮುಂದೆ ಸೋಮವಾರ ಜನಜಂಗುಳಿ ಕಂಡುಬಂತು
ಚಿಂತಾಮಣಿಯ ಜೋಡಿ ರಸ್ತೆಯ ಮಾರುಕಟ್ಟೆಯ ಮುಂದೆ ಸೋಮವಾರ ಜನಜಂಗುಳಿ ಕಂಡುಬಂತು   

ಚಿಂತಾಮಣಿ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿ ಮಾಡಿರುವ ಲಾಕ್‌ಡೌನ್‌ ಅನ್ನು ಜನರು ಸಮರ್ಪಕವಾಗಿ ಪಾಲನೆ ಮಾಡುತ್ತಿಲ್ಲ. ಅಗತ್ಯವಸ್ತುಗಳು ಹಾಗೂ ಔಷಧಿಗಳ ಅಂಗಡಿಗಳ ಮುಂದೆ ಜನಜಂಗುಳಿ ಸಾಮಾನ್ಯವಾಗಿದೆ ಎಂದು ಕೆಲವರು ದೂರುತ್ತಿದ್ದಾರೆ.

ಜನತೆಯ ಒಳಿತಿಗಾಗಿ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಹಗಲಿರುಳು ಶ್ರಮಿಸುತ್ತಿದ್ದರೂ ಜನ ಕಿವಿಗೊಡುತ್ತಿಲ್ಲ. ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 11 ಗಂಟೆಯವರೆಗೆ ನೀಡಿರುವ ಸಮಯದಲ್ಲಿ ಜನರು ನಿಯಮಗಳನ್ನು ಪಾಲಿಸುತ್ತಿಲ್ಲ.

ಸಾಮಾಜಿಕ ಅಂತರವನ್ನು ಕಾಪಾಡುತ್ತಿಲ್ಲ. ಕೆಲವು ಕಡೆ ಚೌಕಗಳ ಗುರುತು ಮಾಡಿದ್ದರೂ ಸದುಪಯೋಗವಾಗುತ್ತಿಲ್ಲ. ಕಳೆದ 8-10 ದಿನಗಳಿಂದ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಪ್ರಯೋಜನವಿಲ್ಲವಾಗಿದೆ ಎಂದು ಕೆಲವರು ವಿಷಾದಿಸುತ್ತಿದ್ದಾರೆ.

ADVERTISEMENT

ಅಗತ್ಯವಸ್ತುಗಳು ಮತ್ತು ಔಷಧಿಗಳ ಖರೀದಿಗೆ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಜನ ಯಾಕೆ ಮುಗಿಬೀಳುತ್ತಿದ್ದಾರೋ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ದೇಶ ವಿದೇಶಗಳ ಪರಿಸ್ಥಿತಿಯನ್ನು ನೋಡಿಯೂ ಈ ರೀತಿ ವರ್ತಿಸುತ್ತಿರುವುದು
ಸರಿಯಲ್ಲ. ನಾಗರಿಕರು ತಮ್ಮ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ವಿಫಲರಾಗುತ್ತಿದ್ದಾರೆ. ಅನಾ
ಹುತಗಳು ಸಂಭವಿಸಿದರೆ ಅಧಿಕಾರಿಗಳನ್ನು ದೂರುತ್ತಾರೆ ಎಂದು ಯುವಕ ವೆಂಕಿ ಅಸಮದಾನ
ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.