ಗೌರಿಬಿದನೂರು: ನಗರದ ಉಪ್ಪಾರ ಕಾಲೋನಿಯಲ್ಲಿ ಮಂಗಳವಾರ ಮಾರಮ್ಮ ಮತ್ತು ಸಪ್ಪಲಮ್ಮ ದೇವಿ ದೀಪೋತ್ಸವ ನಡೆಯಿತು.
ನೂರಾರು ಮಹಿಳೆಯರು ದೀಪಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಮುದುಗೆರೆ ಗ್ರಾಮದ ಗ್ರಾಮದೇವತೆ ಸಪ್ಪಲಮ್ಮ ದೇವತೆಯನ್ನು ಭಕ್ತಿಯಿಂದ ಬರಮಾಡಿಕೊಂಡರು. ಮುಂಜಾನೆಯಿಂದಲೇ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮುಖಂಡ ಸಿದ್ದಪ್ಪ, ನಾರಾಯಣಪ್ಪ, ಮುರಾರಪ್ಪ, ಪ್ರವೀಣ, ಶಶಾಂಕ್, ವಕೀಲ ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.