ADVERTISEMENT

ಕೋಳಿ ಪಂದ್ಯ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 4:41 IST
Last Updated 4 ಆಗಸ್ಟ್ 2022, 4:41 IST

ಚಿಂತಾಮಣಿ: ತಾಲ್ಲೂಕಿನ ಕೈವಾರ ಹೋಬಳಿಯ ಜಂಗಮಶೀಗೇಹಳ್ಳಿ ಗ್ರಾಮದ ಬಳಿ ಸರ್ಕಾರಿ ನೀಲಗಿರಿ ತೋಪಿನಲ್ಲಿ ಕೋಳಿ ಪಂದ್ಯ ಜೂಜಾಟದಲ್ಲಿ ನಿರತವಾಗಿದ್ದ ಗುಂಪಿನ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದ ಮುನಿ ಆಂಜಪ್ಪ, ಚಿಂತಡಪಿ ಗ್ರಾಮದ ಅಶೋಕ, ಎ.ಹುಣಸೇನಹಳ್ಳಿ ಗ್ರಾಮದ ನರಸಿಂಹಪ್ಪ ಬಂಧಿತರು.

ಆರೋಪಿಗಳಿಂದ ಪಣಕ್ಕೆ ಇಟ್ಟಿದ್ದ ₹1050 ನಗದು ಹಣ ಹಾಗೂ 2 ಕೋಳಿ ಹುಂಜಗಳನ್ನು ವಶಪಡಿಸಿಕೊಂಡಿದ್ದಾರೆ.
ಜಂಗಮಶೀಗೇ ಹಳ್ಳಿ ಗ್ರಾಮದ ಸರ್ಕಾರಿ ನೀಲಗಿರಿ ತೋಪಿನಲ್ಲಿ ಕೋಳಿಪಂದ್ಯ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಬ್ ಇನ್ಸ್ ಸ್ಪೆಕ್ಟರ್ ಎಂ.ರೇಣುಕಯ್ಯ ಮತ್ತು ಕೈವಾರ ಹೊರಠಾಣೆಯ ಸಿಬ್ಬಂದಿ ಶ್ರೀನಿವಾಸಗೌಡ, ಪವನ್ ಕುಮಾರ್ ತಂಡ ದಾಳಿ ನಡೆಸಿತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.