ADVERTISEMENT

ಬಡವರಿಗೆ ದಿನಸಿ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಮೇ 2021, 3:01 IST
Last Updated 17 ಮೇ 2021, 3:01 IST
ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಅಂಗವಿಕಲರು, ವಯೋವೃದ್ಧರಿಗೆ ಕರ್ನಾಟಕ ವಿಕಲಚೇತನರ ಸಂಸ್ಥೆಯಿಂದ ದಿನಬಳಕೆಯ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು
ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಅಂಗವಿಕಲರು, ವಯೋವೃದ್ಧರಿಗೆ ಕರ್ನಾಟಕ ವಿಕಲಚೇತನರ ಸಂಸ್ಥೆಯಿಂದ ದಿನಬಳಕೆಯ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು   

ಶಿಡ್ಲಘಟ್ಟ: ಸರ್ಕಾರ ಹಾಗೂ ಸಂಘ, ಸಂಸ್ಥೆಗಳ ನೆರವಿಗಾಗಿ ಎದುರು ನೋಡುವ ಅಂಗವಿಕಲರು ಈಗ ಕೊರೊನಾ ಸಂಕಷ್ಟದಲ್ಲಿರುವವರಿಗೆ ತಾವೇ ಖುದ್ದಾಗಿ ಹೋಗಿ ನೆರವಿನ ಹಸ್ತ ಚಾಚುತ್ತಿದ್ದಾರೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ದುಡಿಮೆಯಿಲ್ಲದೆ, ಜೀವನ ನಡೆಸಲು ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಅಂಗವಿಕಲರು, ವೃದ್ಧರು, ಎಚ್‌ಐವಿ ಪೀಡಿತರು, ಶೋಷಿತ ಮಹಿಳೆಯರು, ವಲಸೆ ಕಾರ್ಮಿಕರು, ಮುಂತಾದವರಿಗೆ ನೆರವಾಗಲು ಕರ್ನಾಟಕ ವಿಶೇಷಚೇತನರ ಸಂಸ್ಥೆ ಮುಂದಾಗಿದೆ.

ತಾಲ್ಲೂಕಿನ ಅಬ್ಲೂಡು, ಮಳಮಾಚನಹಳ್ಳಿ ಹಾಗೂ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗವಿಕಲರು, ವಯೋವೃದ್ಧರಿಗೆ ಭಾನುವಾರ ಆಹಾರ ಕಿಟ್ ವಿತರಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕಿರಣ್ ನಾಯಕ್, ‘ಕೊರೊನಾ ದೇಶವ್ಯಾಪಿ ಹರಡಿದ್ದು, ಅಂಗವಿಕಲರು ಜೀವನ ನಡೆಸಲುಕಷ್ಟವಾಗಿದೆ. ಅದಕ್ಕಾಗಿ ನಮ್ಮ ಸಂಸ್ಥೆಯಿಂದ ಜಿಲ್ಲೆಯಾದ್ಯಂತ ಅಂಗವಿಕಲರ ಮನೆಗಳಿಗೆ ತೆರಳಿ ಅವರಿಗೆ ಆಹಾರ ಪದಾರ್ಥಗಳನ್ನು ವಿತರಿಸುವ ಕಾರ್ಯ ಕೈಗೊಂಡಿದ್ದೇವೆ’ ಎಂದರು.

ADVERTISEMENT

ಸಂಸ್ಥೆಯ ಅಧ್ಯಕ್ಷ ಕೆ.ಜಿ.ಸುಬ್ರಮಣಿ, ಶಿವು, ವಿನೋದ್, ಸಿದ್ದು, ಸುಶೀಲಾ, ನಾರಾಯಣಸ್ವಾಮಿ, ಬೈರೇಗೌಡ, ವೆಂಕಟೇಶ್, ನವೀನ್, ಆನೂರು ತಾರಾ ಆನಂದ್ ನರಸಿಂಹಮೂರ್ತಿ, ಗಂಗಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.