ADVERTISEMENT

ಕಾಫಿ ಉದ್ಯಮ ಸಂಕಷ್ಟ ಪರಿಹಾರ ಚರ್ಚೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 9:45 IST
Last Updated 17 ಜೂನ್ 2011, 9:45 IST

ಚಿಕ್ಕಮಗಳೂರು: ಕಾಫಿ ಉದ್ಯಮ ಎದುರಿಸುತ್ತಿರುವ ಕಾರ್ಮಿಕರ ಸಮಸ್ಯೆ ಗಳ ಪರಿಹಾರಕ್ಕೆ ಮಾರ್ಗೋ ಪಾಯ, ಆಧುನಿಕ ನೀರಾವರಿ ಪದ್ಧತಿ, ನೀರಾವರಿ ಪದ್ಧತಿಯಲ್ಲಿ ಹೊಸತನ, ಜಾಗತಿಕ ಮಾರುಕಟ್ಟೆಗೆ ಕಾಳು ಮೆಣಸು ಕೊಂಡೊಯ್ಯುವ ಕುರಿತು ಗುರುವಾರ ನಗರದ ಕಡೂರು ಕ್ಲಬ್ ಆವರಣದಲ್ಲಿ ಕರ್ನಾಟಕ ಪ್ಲಾಂಟರ್ಸ್‌ ಅಸೋಸಿ ಯೇಷನ್ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಬೆಳೆಗಾರರು ತಮ್ಮ ಅನುಭವ ಹಂಚಿಕೊಂಡರು.

ಕಾಫಿ  ಬೆಳೆಯುವ ಬೇರೆ ಬೇರೆ ರಾಜ್ಯಗಳಲ್ಲಿ ಬೆಳೆಗಾರರೇ ಕಂಡುಕೊಂಡಿರುವ ಪರಿಹಾರಗಳು ಸಮಸ್ಯೆಗೆ ಸ್ವಲ್ಪ ಮಟ್ಟಿನ ಉತ್ತರ ನೀಡುವಲ್ಲಿ ಕಾರ್ಯಾಗಾರ ಸಹಕಾರಿಯಾಯಿತು. ಯಂತ್ರಗಳ ಬಳಕೆಗೆ ಅನುಕೂಲವಾಗುವಂತೆ ಕಾಫಿ ಗಿಡಗಳನ್ನು ಮತ್ತೆ ನೆಡುವ ಕುರಿತು ತಮ್ಮ ಅನುಭವಗಳನ್ನು ಪಳನಿಯ ಸಂತ ಜೋಸೆಫ್ ಎಸ್ಟೇಟಿನ ರೇಜಿಸ್ ಗುಸ್ತಾವ್ ಹಂಚಿಕೊಂಡರು.

ಗಿಡಗಳನ್ನು ಮನುಷ್ಯ ಮಾತ್ರ ನುಸುಳಿಹೋಗುವಷ್ಟುಜಾಗದಲ್ಲಿ ಗಿಡಗಳನ್ನು ನೆಡದೆ ಸುಮಾರು ಅಂತರದಲ್ಲಿ ಗಿಡನೆಟ್ಟರೆ ಟ್ರ್ಯಾಕ್ಟರ್ ಮೂಲಕವೇ ಇತರೆ ವಸ್ತುಗಳನ್ನು ಬಳಸಿಕೊಂಡು ಸ್ಪ್ರೇ ಮಾಡಬಹುದೆಂಬುದನ್ನು ತೋರಿಸಿಕೊಟ್ಟರು. ಕಿತ್ತಳೆ ಗಿಡಕ್ಕೆ ಕೀಟನಾಶಕವನ್ನು ಸಿಂಪಡಿಸಬಹುದೆಂದು ತಾವೇ ಆಲೋಚಿಸಿ ತಯಾರಿಸಿದ ಸಿಂಪರಣೆ ಯಂತ್ರದ ಬಳಕೆಯನ್ನು ವಿವರಿಸಿದರು.

ಕಾರ್ಮಿಕರ ಮಾಡಿದ ಕೆಲಸದಿಂದ ಎಕರೆಗೆ 550 ಕೆ.ಜಿ. ಕಾಫಿ ಬೆಳೆಯಲಾಗುತಿತ್ತು. ಈಗ 1050ಕೆ.ಜಿ.ಗೆ ಏರಿಕೆಯಾಗಿದೆ ಇದಕ್ಕೆ ಕಾರಣ ಆಯಾ ಕಾಲದಲ್ಲಿ ಗಿಡಗಳಿಗೆ ಮಾಡಬೇಕಾದ ಪೋಷಣೆಯನ್ನು ಕಾರ್ಮಿಕರ ಕೊರತೆಯಿಂದ ಮುಂದೂಡದೆ ಯಂತ್ರಗಳನ್ನು ಆ ಕೆಲಸಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡು ಮಾಡಿರುವುದು ಎಂದು ಹೇಳಿದರು. ಸಕಲೇಶಪುರದ ಕಿರೇಹಳ್ಳಿ ಎಸ್ಟೇಟ್ ಮಾಲೀಕ ಡಾ.ಆನಂದಪರೇರ  ಆಧುನಿಕ ನೀರಾವರಿ ಪದ್ಧತಿ ಹಾಗೂ ಅದರಲ್ಲಿ ಹೊಸ ಅನ್ವೇಷಣೆ ಮಾಡಿರುವ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಇಟಲಿಯಿಂದ ದೇಶೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಯಂತ್ರವನ್ನು ತರಿಸಿ ಅದಕ್ಕೆ ಇಲ್ಲಿ ಸಿಗುವ ಪೈಪ್‌ಗಳನ್ನೆ ಬಳಕೆಮಾಡಿಕೊಂಡು ಅತಿ ಎತ್ತರ ಹಾಗೂ ದೂರಕ್ಕೆ ನೀರನ್ನು ಚಿಮ್ಮುವ ಗನ್‌ಗಳನ್ನು ಜೋಡಿಸಿ ಮಳೆಬಾರದಿದ್ದರೂ ಕಾಲಕ್ಕೆ ಸರಿಯಾಗಿ ನೀರುಹಾರಿಸಿ ಹೂ ಅರಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಬೆಳೆಗಾರರು ಕಷ್ಟಕಾಲದಲ್ಲಿ ಯೋಚಿಸಿದರೆ ಯಾವುದೂ ಅಸಾಧ್ಯವಲ್ಲ. ಹಳೆ ವ್ಯವಸ್ಥೆಯನ್ನೆ ನಂಬಿಕೊಳ್ಳದೆ ಹೊಸದಾಗಿ ಏನಾದರೂ ಮಾಡಬೇಕೆಂದು ಚಿಂತಿಸಿದರೆ ಬೆಳೆಗಾರರು ತಮಗೆ ಬೇಕಾದುದ್ದನ್ನು ತಯಾರಿಸಿಕೊಳ್ಳಬಹುದೆಂದು ಸಲಹೆ ನೀಡಿದರು. ಕೆಪಿಎ ಅಧ್ಯಕ್ಷ  ಸಹದೇವ್‌ಬಾಲಕೃಷ್ಣ, ನಿಶಾಂತ್‌ಗುರ್ಜರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.