ಚಿಕ್ಕಮಗಳೂರು: ರೈತರು ಕೃಷಿ ಚಟುವಟಿಕೆ ಕೈಗೊಳ್ಳುವ ಮೊದಲು ತಜ್ಞ ರಿಂದ ಅಗತ್ಯ ಮಾಹಿತಿ ಪಡೆದುಕೊ ಳ್ಳಬೇಕು. ನಂತರ ವೈಜ್ಞಾನಿಕವಾಗಿ ಬೆಳೆ ಬೆಳೆದರೆ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಲು ಸಾಧ್ಯವಿದೆ ಎಂದು ಶಾಸಕ ಸಿ.ಟಿ.ರವಿ ಅಭಿಪ್ರಾ ಯಪಟ್ಟರು.
ನಗರದ ಹಿರಿಯ ತೋಟಗಾರಿಕೆ ಕಚೇರಿ ಆವರಣದಲ್ಲಿ ಬುಧವಾರ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಾಳುಮೆಣಸು ಗಿಡಗಳ ವಿತರಣೆಗೆ ಅರ್ಹ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿ ಯೆಗೆ ಚಾಲನೆ ನೀಡಿ ಮಾತನಾಡಿದರು.
ರೈತರು ಇತ್ತೀಚಿನ ವರ್ಷಗಳಲ್ಲಿ ಕೃಷಿಯ ಬಗ್ಗೆ ಸರಿಯಾದ ತಾಂತ್ರಿಕ ಮಾಹಿತಿ ಪಡೆಯದೆ ಹಳೆಯ ಸಾಂಪ್ರ ದಾಯಿಕ ಪದ್ಧತಿಯಲ್ಲಿ ಬೆಳೆ ಬೆಳೆಯು ತ್ತಿದ್ದಾರೆ. ಅಲ್ಲದೆಮ ಎಲ್ಲರೂ ಒಂದೇ ರೀತಿಯ ಬೆಳೆ ಬೆಳೆಯುತ್ತಿರುವುದರಿಂದ ಸೂಕ್ತ ಬೆಲೆ ಸಿಗದೆ ನಷ್ಟ ಅನುಭ ವಿಸುತ್ತಿದ್ದಾರೆ ಎಂದರು.
ಬೆಳೆಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಉತ್ತಮ ಬೆಳೆ ಬೆಳೆ ಯುವುದರ ಜತೆಗೆ ಕೃಷಿ ಮಾರು ಕಟ್ಟೆಯಲ್ಲಿ ಆನ್‌ಲೈನ್ ಮೂಲಕ ಮಾರಾ ಟಕ್ಕೆ ಮುಂದಾದರೆ ಹೆಚ್ಚು ಲಾಭ ಗಳಿಸಬಹುದು ಎಂದರು.
ರೈತರು ತಮ್ಮ ತಮ್ಮಲ್ಲಿಯೇ ಕೃಷಿ ಚಟುವಟಿಕೆ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಕೃಷಿಯನ್ನು ಲಾಭದಾ ಯಕ ವೃತ್ತಿಯನ್ನಾಗಿಸಲು ಅನೇಕ ಯೋಜನೆ ಜಾರಿಗೆ ತಂದಿವೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತೋಟಗಾರಿಕೆ ಬೆಳೆ ನಷ್ಟಕ್ಕೆ ಮೊದಲು ಯಾವುದೇ ಪರಿಹಾರ ಹಣ ಬಂದಿರಲಿಲ್ಲ. ವಿಶೇಷ ಪ್ರಯತ್ನ ಹಾಕಿದ್ದರಿಂದ ಜಿಲ್ಲೆಯ ರೈತರಿಗೆ ಪರಿಹಾರ ಸಿಗುವಂತಾಗಿದೆ. ಆದರೆ, ಕೆಲವು ರೈತರು ಬ್ಯಾಂಕ್ ಖಾತೆ ಹಾಗೂ ಅಗತ್ಯ ದಾಖಲಾತಿಗಳನ್ನು ನೀಡದೇ ಇರುವುದರಿಂದ ಬೆಳೆ ನಷ್ಟದ ಹಣ ಪಡೆಯಲು ಸಾಧ್ಯವಾಗಿಲ್ಲ. ಇವುಗಳನ್ನು ನೀಡುವುದರೊಂದಿಗೆ ಅದರ ಪ್ರಯೋ ಜನ ಪಡೆದುಕೊಳ್ಳಬೇಕು ಎಂದರು.
ದೇವನೂರು ಭಾಗದಲ್ಲಿ ಮಳೆ ಕೊರತೆ ಇದ್ದರೂ ಕೃಷಿ ಭಾಗ್ಯ ಯೋಜನೆಯಡಿ 20 ಗುಂಟೆ ಭೂಮಿಯಲ್ಲಿ ರೈತರು ಹಸಿರು ಮನೆ ನಿರ್ಮಿಸಿಕೊಂಡು ಮೆಣಸಿನ ಕಾಯಿ ಬೆಳೆದು ₹8ಲಕ್ಷಕ್ಕೂ ಹೆಚ್ಚು ಹಣ ಗಳಿಸಿದ್ದಾರೆ. ಖುದ್ದು ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿದ್ದೇನೆ. ಈ ರೀತಿ ಸಣ್ಣ ಪ್ರಮಾಣದ ಭೂಮಿಯಲ್ಲಿ ಹೆಚ್ಚು ಲಾಭ ಗಳಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದರು.
ಈ ಸಾಲಿನಿಂದ ಫಸಲ್ ಭೀಮ ವಿಮಾ ಯೋಜನೆ ಜಾರಿಗೆ ತರಲಾಗಿದೆ. ರೈತರು ಬೆಳೆ ವಿಮೆ ಮಾಡಿಸುವುದರಿಂದ ಪ್ರಕೃತಿ, ವಿಕೋಪ, ರೋಗ ಸೇರಿದಂತೆ ಮತ್ತಿತರ ಕಾರಣದಿಂದ ಬೆಳೆ ನಷ್ಟವಾ ದಲ್ಲಿ ವಿಮೆ ಹಣ ಪಡೆಯಬಹುದು. ಯಾವುದೇ ಆರ್ಥಿಕ ನಷ್ಟ ರೈತರಿಗೆ ಆಗುವುದಿಲ್ಲ ಎಂದು ಸಲಹೆ ನೀಡಿದರು.
ಶಾಸಕ ಬಿ.ಬಿ ನಿಂಗಯ್ಯ ಮಾತನಾಡಿ, ಕಡಿಮೆ ನೀರಿನ ಲಭ್ಯತೆಯಲ್ಲಿಯೂ ತೋಟಗಾರಿಕೆ ಬೆಳೆಗಳನ್ನು ಬೆಳೆಯು ವುದರಿಂದ ಆರ್ಥಿಕಮಟ್ಟ ವೃದ್ಧಿಸಿಕೊಳ್ಳ ಬಹುದು ಎಂದರು.
ಕಾಳುಮೆಣಸಿನ ಬೆಳೆಯನ್ನು ಒಂದು ಎಕರೆಯಲ್ಲಿ ಉತ್ತಮವಾಗಿ ಬೆಳೆದರೆ ಒಂದು ಟನ್‌ಗೆ ₹6 ಲಕ್ಷ ಆದಾಯ ಗಳಿಸಲು ಸಾಧ್ಯ. ಇದನ್ನು ಮಲೆನಾಡು ಪ್ರದೇಶವಲ್ಲದೆ, ಬಯಲು ಸೀಮೆ ಅಡಿಕೆ ತೋಟಗಳಲ್ಲಿಯೂ ಬೆಳೆಯಬಹುದು. ರೈತರು ಪ್ರಯತ್ನಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ಇಲಾಖೆಯಿಂದ ನೀಡುತ್ತಿರುವ ಸವಲತ್ತು ಗಳನ್ನು ಪಡೆಯಲು ಹೇರಳವಾಗಿ ಅರ್ಜಿ ಗಳನ್ನು ಸಲ್ಲಿಸಲಾಗುತ್ತಿದೆ. ಫಲಾನುಭವಿ ಗಳ ಆಯ್ಕೆ ಮಾಡುವುದು ಜನಪ್ರತಿನಿ ಧಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಆ ಹಿನ್ನೆಲೆಯಲ್ಲಿ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಬೇಕು ಎಂದರು.
ಜಿ.ಪಂ ಸದಸ್ಯೆ ಪ್ರೇಮ ಮಂಜು ನಾಥ್. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಸಾಂಬಾರ ಮಂಡಳಿ ನಿರ್ದೇಶಕ ಪವನ್, ನಗರಸಭೆ ಸದಸ್ಯ ಎಚ್.ಡಿ.ತಮ್ಮಯ್ಯ, ಜಿಪಂ ಸದಸ್ಯ ಬೀಕನಹಳ್ಳಿ ಸೋಮಶೇಖರ್, ತೋಟ ಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮ, ತೋಟಗಾರಿಕೆ ಅಧಿಕಾರಿ ಸದಾನಂದ ಇದ್ದರು.
ಹಸಿರುಮನೆಯಲ್ಲಿ ತರಕಾರಿ ಬೆಳೆ"
ಚಿಕ್ಕಮಗಳೂರು: ‘ಹಸಿರು ಮನೆಯಲ್ಲಿ ಕೈಗೊಂಡಿರುವ ಕೃಷಿಯಿಂದ ಉತ್ತಮ ತರಕಾರಿ ಬೆಳೆಯಲು ಸಾಧ್ಯವಾಗಿದೆ. ಕಳೆದ 3 ತಿಂಗಳಿಂದ ಒಂದೂವರೆ ಲಕ್ಷ ಆದಾಯ ಸಿಕ್ಕಿದೆ. ಈ ವರ್ಷ ಖರ್ಚು ಕಳೆದು ಕನಿಷ್ಠ ನಾಲ್ಕೂವರೆ ಲಕ್ಷದವರೆಗೆ ನಿವ್ವಳ ಆದಾಯ ಸಂಪಾದಿಸುವ ನಿರೀಕ್ಷೆ ಇದೆ’
– ಇದು ಲಕ್ಯಾ ಭಾಗದ ಕೃಷಿ ರಾಜಣ್ಣ ಅವರು ತರಕಾರಿ ಬೆಳೆಯಲ್ಲಿ ಲಾಭ ಗಳಿಸಿದ ಯಶೋಗಾಥೆಯ ನುಡಿ.
ತಾಲ್ಲೂಕಿನ ಲಕ್ಯಾ ಭಾಗದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ನಿರ್ಮಿಸಿರುವ ಹಸಿರು ಮನೆ ಕೃಷಿ ಚಟುವಟಿಕೆ ಕೆಂದ್ರಗಳಿಗೆ ಶಾಸಕ ಸಿ.ಟಿ.ರವಿ ಅವರು ಭೇಟಿ ನೀಡಿದಾಗ ಶಾಸಕರೊಂದಿಗೆ ರೈತರು ತನ್ನ ಅನುಭವಗಳನ್ನು ಹಂಚಿಕೊಂಡರು.
‘ಹೊಲದಲ್ಲಿ ಕೊರೆಸಿರುವ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರಿಲ್ಲ. ಪ್ರತಿ ದಿನ 200 ಲೀಟರ್ ನೀರು ಪೂರೈಸುತ್ತೇನೆ ಅಷ್ಟೆ. ಬೆಳೆಗಳಿಗೆ ಈಗ ಯಾವುದೇ ರೋಗ ರುಜಿನವಿಲ್ಲ’ ಎಂದು ‘ಹಸಿರು ಮನೆ’ಯ ಪರಿಣಾಮ ತೆರೆದಿಟ್ಟರು.
‘20 ಗುಂಟೆ ಜಾಗದಲ್ಲಿ ಹಸಿರು ಮನೆ ನಿರ್ಮಿಸಿ ಮೆಣಸಿನಕಾಯಿ ಬೆಳೆಯುತ್ತಿದ್ದೇವೆ. ಆರಂಭದಲ್ಲಿ ಕೆ.ಜಿ.ಗೆ ₹5ರಿಂದ ₹6, ನಂತರದ ದಿನಗಳಲ್ಲಿ ₹40ರಿಂದ ₹50ರವರೆಗೆ ಪ್ರತಿ ಕೆ.ಜಿ. ಮೆಣಸಿನಕಾಯಿ ಮಾರಾಟ ಮಾಡಿದ್ದೇವೆ. ವರ್ಷಕ್ಕೆ ಸುಮಾರು ನಾಲ್ಕೂವರೆ ಲಕ್ಷ ನಿವ್ವಳ ಲಾಭ ಗಳಿಸಿದ್ದೇವೆ’ ಎಂದು ಲಕ್ಯಾ ಗ್ರಾಮದ ರೋಹಿತ್ ಹಾಗೂ ದಿಲೀಪ್ ತಮ್ಮ ಅನುಭವ ಹಂಚಿಕೊಂಡರು.
‘ಇದರ ಜತೆಗೆ ಜಮೀನಿನ ಕೃಷಿ ಚಟುವಟಿಕೆ ಮಾಡಿಕೊಳ್ಳುತ್ತಿದ್ದೇವೆ. ಇನ್ನೂ 20 ಗುಂಟೆ ಜಾಗದಲ್ಲಿ ಹಸಿರು ಮನೆ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯಿಂದ ಸವಲತ್ತು ಕೊಡಿ ಸಬೇಕು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಚಿಕ್ಕಮಗಳೂರು ತಾಲ್ಲೂಕಿನ ಬಯಲು ಸೀಮೆ ಹೋಬಳಿಗಳಿಗೆ ಕೃಷಿ ಭಾಗ್ಯ ಯೋಜನೆ ವಿಸ್ತರಿಸಲು ಸಚಿವ ರೊಂದಿಗೆ ಚರ್ಚಿಸಲಾ ಗುವುದು. ಹೆಚ್ಚಿನ ಸವಲತ್ತು ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ರೈತರು ಸಾವಯವ ಗೊಬ್ಬರದ ಬಳಕೆಗೆ ಹೆಚ್ಚು ಒತ್ತು ನೀಡಬೇಕು. ರೈತರು ಸಮಗ್ರ ಕೃಷಿ ಅಳವಡಿಸಿ ಕೊಳ್ಳಬೇಕು ರೈತರಿಗೆ ಆಧುನಿಕ ಕೃಷಿ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮ ಅವರಿಗೆ ಶಾಸಕರು ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.