ADVERTISEMENT

ಗೋದಾಮು ತೆರವು ಕಾರ್ಯ ಆರಂಭ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 5:20 IST
Last Updated 6 ಜುಲೈ 2012, 5:20 IST

ನರಸಿಂಹರಾಜಪುರ: ಇಲ್ಲಿನ ಬಸ್ ನಿಲ್ದಾಣದೊಳಗಿನ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಗಟು ಮಳಿಗೆಯ ಗೋದಾಮನ್ನು ತೆರವುಗೊಳಿಸುವ ಕಾರ್ಯಕ್ಕೆ ಪಟ್ಟಣ ಪಂಚಾಯಿತಿ ಕಳೆದೆರೆಡು ದಿನಗಳಿಂದ ಚಾಲನೆ ನೀಡಲಾಗಿದೆ.

ಸುಮಾರು 50 ಅಡಿ ಅಗಲ ಹಾಗೂ 70 ಅಡಿ ಉದ್ದದ ಸಂಪೂರ್ಣ ಕಲ್ಲುಗಳಿಂದ ನಿರ್ಮಿಸಲಾಗಿರುವ ಈ ಗೋದಾಮನ್ನು ತೆರವುಗೊಳಿಸಿ ಬಸ್ ನಿಲ್ದಾಣವನ್ನು  ವಿಸ್ತರಿಸಲಾಗುತ್ತದೆ. ಬಸ್ ನಿಲ್ದಾಣದೊಳಗೆ ಈ ಗೋದಾಮಿದ್ದುದರಿಂದ ಬಸ್ ಹಾಗೂ ಆಟೊ ನಿಲುಗಡೆಯಾಗುತ್ತಿದ್ದವು.

ಅಲ್ಲದೆ ಪ್ರತಿ ತಿಂಗಳು ಪಡಿತರ ವ್ಯವಸ್ಥೆಗೆ ಆಹಾರ ಸರಬರಾಜು ಮಾಡುವ ಲಾರಿಗಳು ಇಲ್ಲೇ ಬಂದು ನಿಲ್ಲುತ್ತಿದ್ದುದರಿಂದ ಬಸ್ ಹಾಗೂ ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಕ್ಷೇತ್ರದ ಶಾಸಕರು ಹಾಗೂ ಪಟ್ಟಣ ಪಂಚಾಯಿತಿ ಈ ಗೋದಾಮನ್ನು ತೆರವುಗೊಳಿಸಿ ಬಸ್ ನಿಲ್ದಾಣ ವಿಸ್ತರಣೆಗೆ ಯೋಜನೆ ರೂಪಿಸಿದ್ದಾರೆ. ಈ ಗೋದಾಮು ಇದ್ದ ಜಾಗದಲ್ಲಿ ಆಟೊ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತದೆ.
 
ಬಸ್ ನಿಲ್ದಾಣ ವಿಸ್ತರಣೆಯಾಗಿದೆ. ಆಹಾರ ನಿಗಮದ ಗೋದಾಮನ್ನು ಉಪಬಂಧಿಖಾನೆಗೆ ಹೋಗುವ ಮಾರ್ಗದಲ್ಲಿ ಗುರುತಿಸುವ ನಿವೇಶನದಲ್ಲಿ ಇದೇ ಗೋದಾಮಿನ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗುತ್ತದೆ. ಬಸ್ ನಿಲ್ದಾಣದಲ್ಲಿದ್ದ ಗೋದಾಮನ್ನು ತೆರವುಗೊಳಿಸಿ ಬಸ್ ವಿಸ್ತರಣೆ ಕಾರ್ಯವನ್ನು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.